Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ ಕೋಟ್: ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಟಿ20 ಪಂದ್ಯ ಇಂದು ರಾಜ್ ಕೋಟ್ ನಲ್ಲಿ ನಡೆಯಲಿದೆ.
ಮೂರು ಪಂದ್ಯಗಳ ಟಿ20 ಸರಣಿ 1-1 ರಿಂದ ಸಮಬಲಗೊಂಡಿರುವುದರಿಂದ ಇಂದಿನ ಪಂದ್ಯಕ್ಕೆ ಫೈನಲ್ ನ ಮಹತ್ವವಿದೆ. ಎರಡೂ ಪಂದ್ಯಗಳು ರೋಚಕವಾಗಿದ್ದವು. ಮೊದಲ ಪಂದ್ಯದಲ್ಲಿ ಲಂಕಾ ಕೊನೆಯ ಕ್ಷಣದಲ್ಲಿ ಸೋತಿತ್ತು. ಎರಡನೆಯ ಪಂದ್ಯದಲ್ಲಿ ಭಾರತ ಎಡವಿತ್ತು.
ಟೀಂ ಇಂಡಿಯಾಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಗರ ವೈಫಲ್ಯ ತಲೆನೋವಾಗಿದೆ. ಜೊತೆಗೆ ಕಳೆದ ಪಂದ್ಯದಲ್ಲಿ ಬೌಲರ್ ಗಳು ದುಬಾರಿಯಾದರು. ಅದರಲ್ಲೂ ಅರ್ಷ್ ದೀಪ್ ಸಿಂಗ್ ನೋ ಬಾಲ್ ವಿವಾದ ಮರೆಯುವಂತೇ ಇಲ್ಲ. ಈ ಎರಡು ಹುಳುಕುಗಳನ್ನು ಸರಿಪಡಿಸದೇ ಇದ್ದರೆ ಗೆಲುವು ಕಷ್ಟವಾಗಲಿದೆ. ಇಂದಿನ ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ.