ಇಂದೇ ಸರಣಿ ಗೆಲ್ಲುತ್ತಾ ಟೀಂ ಇಂಡಿಯಾ?

Webdunia
ಶುಕ್ರವಾರ, 6 ಜುಲೈ 2018 (09:04 IST)
ಕಾರ್ಡಿಫ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಇಂದು ದ್ವಿತೀಯ ಪಂದ್ಯವಾಡಲಿದೆ.
 

ಕಾರ್ಡಿಫ್ ಗೆ ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಕಠಿಣ ಅಭ್ಯಾಸ ನಡೆಸಿದ್ದಾರೆ. ಸರಣಿಯಲ್ಲಿ ಒಟ್ಟು ಮೂರು ಟಿ20 ಪಂದ್ಯಗಳಿದ್ದು, ಇಂದು ಭಾರತ ಗೆದ್ದರೆ ಸರಣಿ ಕೈವಶವಾಗಲಿದೆ.

ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದ ಅತಿಥೇಯ ತಂಡಕ್ಕೆ ಇದೀಗ ಕೆಎಲ್ ರಾಹುಲ್, ಕುಲದೀಪ್ ಯಾದವ್ ರನ್ನು ಎದುರಿಸುವ ಬಗ್ಗೆ ಹೆಚ್ಚು ಚಿಂತೆ ಕಾಡಿದೆ. ಕಳೆದ ಪಂದ್ಯದಲ್ಲಿ ಕುಲದೀಪ್ ಯಾದವ್ ಬೌಲಿಂಗ್ ಅರಿಯದೇ ಹೋಗಿದ್ದ ಇಂಗ್ಲೆಂಡ್ ಈ ಪಂದ್ಯಕ್ಕೆ ಸರಿಯಾಗಿ ತಯಾರಿ ನಡೆಸುವುದಾಗಿ ಹೇಳಿತ್ತು.

ತವರಿನ ಅಭಿಮಾನಿಗಳ ಎದುರು ಗೆಲ್ಲಬೇಕಾದರೆ ಇಂಗ್ಲೆಂಡ್ ಗೆ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಆದರೆ ಬ್ಯಾಟಿಂಗ್ ನಲ್ಲೂ ಸುಧಾರಿಸಿದರೆ ಮಾತ್ರ ಇದು ಸಾಧ್ಯ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ನಡೆಯಲಿದ್ದು, ಸೋನಿ ವಾಹಿನಿಯಲ್ಲಿ ನೇರಪ್ರಸಾರವಿರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs PAK: ಟೀಂ ಇಂಡಿಯಾ ಬೌಲರ್ ಗಳ ಮುಂದೆ ಉಸಿರೆತ್ತದ ಪಾಕ್ ಬ್ಯಾಟಿಗರು, ಭಾರತಕ್ಕೆ ಭರ್ಜರಿ ಗೆಲುವು

IND vs PAK :ಪಾಕಿಸ್ತಾನದ ಪ್ರಮುಖ ಬೌಲರ್ ಗಳನ್ನೇ ಟಾರ್ಗೆಟ್ ಮಾಡಿದ ಇಶಾನ್ ಕಿಶನ್ video

AUS vs IND T20 Womens Series: ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ, ಹರ್ಮನ್ ಪ್ರೀತ್‌ ಏನ್‌ ಕ್ಯಾಚ್‌, ವಿಡಿಯೋ

ಪಾಕಿಸ್ತಾನ ಕ್ರಿಕೆಟಿಗರನ್ನು ಹೀಗೆ ಶೇಪ್ ಔಟ್ ಮಾಡೋದಾ ಸೂರ್ಯಕುಮಾರ್ ಯಾದವ್ Video

T20 WC: ಕಿವೀಸ್‌ ತಂಡವನ್ನು ಬಗ್ಗುಬಡಿದು ಸೂಪರ್‌ ಎಂಟರ ಘಟ್ಟಕ್ಕೆ ಲಗ್ಗೆ ಹಾಕಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments