Publish Date: Wed, 08 Jun 2022 (10:09 IST)
Updated Date: Wed, 08 Jun 2022 (10:09 IST)
ನವದೆಹಲಿ: ಕೊರೋನಾ ಬಂದಾಗಿನಿಂದ ಕ್ರಿಕೆಟ್ ಸರಣಿಗಳಲ್ಲಿ ಬಯೋ ಬಬಲ್ ವಾತಾವರಣದಿಂದ ಹೈರಾಣಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಈಗ ನಿಟ್ಟುಸಿರು ಬಿಡುವಂತಾಗಿದೆ.
ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ವಾತಾವರಣದಿಂದ ಮುಕ್ತಿ ನೀಡಲಾಗಿದೆ. ಇನ್ನು ಮುಂದಿನ ಸರಣಿಗಳಲ್ಲಿ ಕ್ರಿಕೆಟಿಗರು ಎಂದಿನಂತೆ ಮಾಮೂಲಾಗಿ ಓಡಾಡಿಕೊಂಡಿರಬಹುದು.
ಇದುವರೆಗೆ ಹೋಟೆಲ್ ನಲ್ಲಿ ವಾಸ್ತವ್ಯವಿರುವಾಗ, ಹೊರಗೆ ಓಡಾಡಲು ಎಲ್ಲದಕ್ಕೂ ಕಟ್ಟುನಿಟ್ಟು ಇತ್ತು. ಇದರಿಂದ ಮಾನಸಿಕವಾಗಿ ಕ್ರಿಕೆಟಿಗರು ಕುಗ್ಗಿ ಹೋಗುತ್ತಿದ್ದರು. ಆದರೆ ಇನ್ನೀಗ ಆ ಭಯವಿಲ್ಲ. ಇದೇ ವಿಚಾರವಾಗಿ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಸಂತಸ ವ್ಯಕ್ತಪಡಿಸಿದ್ದಾರೆ. ಬಯೋ ಬಬಲ್ ಹೋಗಿರುವುದೇ ನಮಗೆ ಅತ್ಯಂತ ಸಮಾಧಾನದ ವಿಚಾರ ಎಂದಿದ್ದಾರೆ.