ಭಾರತ-ದ.ಆಫ್ರಿಕಾ ಟೆಸ್ಟ್:ಮತ್ತೆ ವಿಫಲರಾದ ಟೀಂ ಇಂಡಿಯಾ ಆರಂಭಿಕರು

Webdunia
ಗುರುವಾರ, 13 ಜನವರಿ 2022 (08:50 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಗೆ ಮತ್ತೆ ಆರಂಭಿಕರು ಕೈಕೊಟ್ಟಿದ್ದಾರೆ.

13 ರನ್ ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಬೇಗನೇ ನಿರ್ಗಮಿಸುವ ಮೂಲಕ ಸಂಕಷ್ಟ ತಂದಿಟ್ಟರು. ರಾಹುಲ್ 10 ರನ್, ಮಯಾಂಕ್ 7 ರನ್ ಗೆ ವಿಕೆಟ್ ಒಪ್ಪಿಸಿದರು.

ಇವರ ಬಳಿಕ ಜೊತೆಯಾಗಿರುವ ನಾಯಕ ವಿರಾಟ್ ಕೊಹ್ಲಿ-ಚೇತೇಶ್ವರ ಪೂಜಾರ ನಿನ್ನೆಯ ದಿನದಂತ್ಯಕ್ಕೆ ಹೆಚ್ಚಿನ ಅಪಾಯ ಸಂಭವಿಸಿದಂತೆ ನೋಡಿಕೊಂಡರು. ದಿನದಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸುವ ಮೂಲಕ 70 ರನ್ ಗಳ ಮುನ್ನಡೆ ಸಾಧಿಸಿತು. ಕೊಹ್ಲಿ 14, ಪೂಜಾರ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ಇನಿಂಗ್ಸ್ ನಲ್ಲೂ ಇದೇ ಜೋಡಿ ಭಾರತಕ್ಕೆ ಆಧಾರವಾಗಿತ್ತು.

ಇದಕ್ಕೂ ಮೊದಲು ದ.ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 210 ರನ್ ಗಳಿಗೆ ಆಲೌಟ್ ಆಯಿತು. ವೇಗಿ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಗಳ ಗೊಂಚಲು ಪಡೆದರೆ, ಉಮೇಶ್, ಮೊಹಮ್ಮದ್ ಶಮಿ ತಲಾ 2, ಶ್ರಾದ್ಧೂಲ್ ಠಾಕೂರ್ 1 ವಿಕೆಟ್ ಪಡೆದರು. ಅಶ್ವಿನ್ ದುರದೃಷ್ಟವಶಾತ್ ವಿಕೆಟ್ ಗಳಿಸಲು ವಿಫಲರಾದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಬ್ ಕೀ ಬಾರ್ ಕೊಹ್ಲಿ ಕೀ ಸರ್ಕಾರ್ ಎಂದ ಫ್ಯಾನ್ಸ್: ವಿರಾಟ್ ಕೊಹ್ಲಿ ರಿಯಾಕ್ಷನ್ ತಪ್ಪದೇ ನೋಡಿ Video

ನಾನೇನೂ ಮಾಡಿಲ್ಲ.. ಬೇಸರದಲ್ಲಿ ಕೂತಿದ್ದ ಟಿಮ್ ಡೇವಿಡ್: ಆರ್ ಸಿಬಿ ಆಟಗಾರರು ಮಾಡಿದ್ದೇನು Video

ಕ್ವಾಲಿಫೈಯರ್ ಪಂದ್ಯಕ್ಕೆ ಮೊದಲೇ ಗುಜರಾತ್ ತಂಡಕ್ಕೆ ಹೀಗೆ ಟೀಸ್ ಮಾಡಿದ್ರು ವಿರಾಟ್ ಕೊಹ್ಲಿ Video

RCB VS GT:ರಜತ್ ಪಟಿದಾರ್ ಬ್ಯಾಟಿಂಗ್ ಅಬ್ಬರ, ಗುಜರಾತ್ ಟೈಟನ್ಸ್‌ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ

RCB VS GT: ರಜತ್ ಪಟಿದಾರ್ ಅಬ್ಬರ, ಜಿಟಿಗೆ ಸವಾಲಿನ ಗುರಿ

ಮುಂದಿನ ಸುದ್ದಿ
Show comments