ಕೇಪ್ ಟೌನ್: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಎಂದರೆ ರನ್ ಗಳಿಸುವುದರಲ್ಲಿ ಅತ್ಯಂತ ನಿಧಾನಿ ಎಂದೇ ಚಿರಪರಿಚಿತ. ಆದರೆ ಇಂದಿನ ದಿನದಾಟದಲ್ಲಿ ಹೊಡೆಬಡಿಯ ಆಟಕ್ಕೆ ಹೆಸರಾಗಿರುವ ವಿರಾಟ್ ಕೊಹ್ಲಿ, ಪೂಜಾರಗಿಂತಲೂ ನಿಧಾನವಾಗಿ ಇನಿಂಗ್ಸ್ ಕಟ್ಟುವುದರತ್ತ ಗಮನ ಹರಿಸಿದ್ದಾರೆ.
ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ನಾಯಕ ಕೊಹ್ಲಿ 67 ಎಸೆತಗಳನ್ನು ಎದುರಿಸಿ ಗಳಿಸಿದ್ದು 16 ರನ್ ಮಾತ್ರ. ಆದರೆ ಪೂಜಾರ 64 ಎಸೆತಗಳಿಂದ 34 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆದರೆ ಇವರಿಬ್ಬರ ಎಚ್ಚರಿಕೆಯ ಆಟದ ಫಲವಾಗಿ ಭಾರತ ಈಗ ಎರಡನೇ ಅವಧಿಯಲ್ಲಿ ಕೊಂಚ ಸುಧಾರಿಸಿಕೊಂಡಿದೆ. ಆರಂಭದಲ್ಲೇ ಕೆಎಲ್ ರಾಹುಲ್ (12 ರನ್) ಮತ್ತು ಮಯಾಂಕ್ ಅಗರ್ವಾಲ್ (15) ವಿಕೆಟ್ ಒಪ್ಪಿಸಿದ್ದರಿಂದ ಭಾರತಕ್ಕೆ ಆಘಾತ ಸಿಕ್ಕಿತ್ತು. ಆದರೆ ಈಗ ಕೊಹ್ಲಿ-ಪೂಜಾರ ಜೋಡಿ ಎಚ್ಚರಿಕೆಯ ಆಟದಿಂದ ಟೀಂ ಇಂಡಿಯಾಕ್ಕೆ ಚೇತರಿಕೆ ನೀಡಿದ್ದಾರೆ.