ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿರುವ ಟೀಂ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್ ನಡೆಸಿದೆ. ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ.
ಪೃಥ್ವಿ ಶಾ ದ್ವಿತೀಯ ಬಾಲ್ ಗೇ ಔಟಾದರು. ಹೀಗಾಗಿ ಭಾರತ ರನ್ ಗಳಿಸುವ ಮೊದಲೇ ವಿಕೆಟ್ ಕಳೆದುಕೊಂಡಿತು. ಬಳಿಕ ಚೇತೇಶ್ವರ ಪೂಜಾರ ಮತ್ತು ಮಯಾಂಕ್ ಅಗರ್ವಾಲ್ ನಿಧಾನಗತಿಯ ಆಟವಾಡಿ ವಿಕೆಟ್ ಕಾಯ್ದುಕೊಂಡರು. ಈ ನಡುವೆ ಪೂಜಾರ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಮಾಡುತ್ತಾ ಎದುರಾಳಿಗಳನ್ನು ಹತಾಶೆಗೆ ದೂಡಿದ್ದಾರೆ. ಇದುವರೆಗೆ 88 ಎಸೆತ ಎದುರಿಸಿ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇವರಿಗೆ ತಕ್ಕ ಸಾಥ್ ನೀಡಿದ್ದ ಮಯಾಂಕ್ ಅಗರ್ವಾಲ್ ಉತ್ತಮವಾಗಿ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರೂ, 40 ಎಸೆತ ಎದುರಿಸಿ 17 ರನ್ ಗಳಿಸಿದಾಗ ಪ್ಯಾಟ್ ಕ್ಯುಮಿನ್ಸ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಇದೀಗ ಪೂಜಾರಗೆ ಜೊತೆಯಾಗಿರುವ ಕೊಹ್ಲಿ 5 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.