Publish Date: Wed, 21 Sep 2022 (08:00 IST)
Updated Date: Wed, 21 Sep 2022 (08:23 IST)
ಮುಂಬೈ: ಟಿ20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾಗೆ ಹೊಸ ಜರ್ಸಿ ನೀಡಲಾಗುತ್ತಿದ್ದು, ಈ ಜೆರ್ಸಿಯನ್ನು ಅಭಿಮಾನಿಗಳೂ ಖರೀದಿಸಲು ಅವಕಾಶವಿದೆ.
ಟೀಂ ಇಂಡಿಯಾ ಕ್ರಿಕೆಟಿಗರ ಸಮವಸ್ತ್ರದ ಪ್ರಾಯೋಜಕತ್ವವನ್ನು ಎಂಪಿಎಲ್ ಸಂಸ್ಥೆ ವಹಿಸಿಕೊಂಡಿದ್ದು, ನೀಲಿ ಬಣ್ಣದ ಸಮವಸ್ತ್ರವೊಂದಕ್ಕೆ ಆಗುವ ವೆಚ್ಚವೆಷ್ಟು ಗೊತ್ತೇ? ಈ ಸಮವಸ್ತ್ರದ ಮೂಲ ಬೆಲೆ ಸುಮಾರು 4000 ರೂ. ಎಂಪಿಎಲ್ ಅಧಿಕೃತ ವೆಬ್ ಸೈಟ್ ನಲ್ಲಿ ಈ ಜೆರ್ಸಿಯನ್ನು ಖರೀದಿಸಬಹುದು.
ಒಂದು ವೇಳೆ ನಿಮಗೆ ನಿಮ್ಮ ಮೆಚ್ಚಿನ ಕ್ರಿಕೆಟಿಗರ ಹೆಸರು ಪ್ರಿಂಟ್ ಮಾಡಲಾಗಿರುವ ಜೆರ್ಸಿ ಬೇಕೆಂದಾದರೆ 3,999 ರೂ. ನೀಡಬೇಕು. ಇಲ್ಲವೇ ಖಾಲಿ ಸಮವಸ್ತ್ರ ಬೇಕೆಂದರೆ ಕೇವಲ 1,999 ರೂ. ನೀಡಿದರೂ ಸಾಕು. ಎಂಪಿಎಲ್ ಸ್ಪೋರ್ಟ್ಸ್ ಡಾಟ್ ಇನ್ ಎಂಬ ವೆಬ್ ಸೈಟ್ ನಲ್ಲಿ ಖರೀದಿ ಮಾಡಬಹದು.