ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅರ್ಧಶತಕ ಸಿಡಿಸಿದ ಕೆಎಲ್ ರಾಹುಲ್ ಹೊಸ ದಾಖಲೆಯನ್ನು ಮಾಡಿದ್ದಾರೆ.
ಫಾರ್ಮ್ ಗೆ ಬಂದ ಕೆಎಲ್ ರಾಹುಲ್ 35 ಎಸೆತಗಳಲ್ಲಿ ಭರ್ಜರಿ 3 ಸಿಕ್ಸರ್ ಸಹಿತ 55 ರನ್ ಗಳಿಸಿದರು. ಇದರೊಂದಿಗೆ ರಾಹುಲ್ ಟಿ20 ಕ್ರಿಕೆಟ್ ನಲ್ಲಿ 2000 ರನ್ ಪೂರ್ತಿ ಮಾಡಿದರು.
40 ಪ್ಲಸ್ ಸರಾಸರಿಯೊಂದಿಗೆ ಅತೀ ವೇಗವಾಗಿ 2000 ರನ್ ಪೂರ್ತಿ ಮಾಡಿದ ಮೂರನೇ ಆಟಗಾರ ಎಂಬ ದಾಖಲೆ ಕೆಎಲ್ ರಾಹುಲ್ ರದ್ದಾಯಿತು.