Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೈದರಾಬಾದ್: ಈ ವರ್ಷ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಟೀಂ ಇಂಡಿಯಾ ಕ್ರಿಕೆಟಿಗರೂ ಕಿರಿ ಕಿರಿ ಅನುಭವಿಸುವಂತಾಗಿದೆ. ಯಾವುದೇ ಮೈದಾನಕ್ಕೆ ಹೋದರೂ ಮಳೆಯ ಭೀತಿಯ ನಡುವೆಯೇ ಪಂದ್ಯ ಮುಗಿಸಬೇಕಿದೆ.
ಕಳೆದೆರಡು ಟಿ20 ಪಂದ್ಯಗಳಲ್ಲೂ ಮಳೆಯ ಭೀತಿಯ ನಡುವೆ ಆಡಿದ್ದ ಕ್ರಿಕೆಟಿಗರು ಇಂದು ಹೈದರಾಬಾದ್ ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲೂ ಮಳೆ ಬಾರದಿರಲಿ ಎಂದು ಪ್ರಾರ್ಥಿಸುವಂತಾಗಿದೆ.
ಹೇಳಿ ಕೇಳಿ ಈಗ ಸರಣಿ ಸಮಬಲವಾಗಿದೆ. ಸರಣಿ ಗೆಲ್ಲಬೇಕಾದರೆ ಉಭಯ ತಂಡಗಳಿಗೂ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಮಳೆ ಬಂದು ಡಕ್ ವರ್ತ್ ನಿಯಮ ಅನ್ವಯವಾದರೆ ಗೆಲುವಿನ ಗುರಿ ಏನಾಗುತ್ತದೋ ಎಂದು ಹೇಳಲಾಗದು. ಹೀಗಾಗಿ ಭಾರತ, ಆಸ್ಟ್ರೇಲಿಯಾ ಕ್ರಿಕೆಟಿಗರು ಮಳೆ ಬಾರದಿರಲಿ ಎಂದು ಪ್ರಾರ್ಥಿಸುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ