Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಹಿರಿಯ ವೇಗಿ ಆಶಿಷ್ ನೆಹ್ರಾ ತಾನು ನಿವೃತ್ತಿ ನಂತರ ಐಪಿಎಲ್ ನಲ್ಲಿ ಆಡುವುದಿಲ್ಲ ಎಂದಿದ್ದಾರೆ.
38 ವರ್ಷದ ವೇಗಿ ನವಂಬರ್ 1 ರಂದು ನ್ಯೂಜಿಲೆಂಡ್ ವಿರುದ್ಧ ತಮ್ಮ ತವರು ದೆಹಲಿ ಮೈದಾನದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಲಿದ್ದಾರೆ. ತಮ್ಮ ನಿವೃತ್ತಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ ನೆಹ್ರಾ ಮುಂದೆ ನನಗೆ ಐಪಿಎಲ್ ಆಡುವ ಬಯಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಎಲ್ಲರೂ ನನ್ನನ್ನು ಯಾಕೆ ಐಪಿಎಲ್ ನಿಂದಲೂ ನಿವೃತ್ತಿ ಪಡೆಯುತ್ತೀಯಾ ಎಂದು ಕೇಳುತ್ತಿದ್ದಾರೆ. ನಿವೃತ್ತಿ ನಂತರ ಐಪಿಎಲ್ ಆದರೂ ಆಡಬಹುದಲ್ಲಾ ಎನ್ನುತ್ತಿದ್ದಾರೆ. ಆದರೆ ನಾನು ಕ್ರಿಕೆಟ್ ಆಡಲು ಕಲಿತಿದ್ದೇ ದೇಶಕ್ಕಾಗಿ ಆಡಲು’ ಎಂದು ನೆಹ್ರಾ ಭಾವನಾತ್ಮಕವಾಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ