Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಟಕ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ಕಟಕ್ ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ನಿನ್ನೆಯೇ ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ.
ಬಹಳ ಸಮಯದ ನಂತರ ಟೀಂ ಇಂಡಿಯಾ ಕ್ರಿಕೆಟಿಗರು ಆಡಲು ಬಂದಿರುವುದರಿಂದ ಕಟಕ್ ಪ್ರೇಕ್ಷಕರಲ್ಲಿ ಕುತೂಹಲವಿದೆ. ಹೀಗಾಗಿ ನಿನ್ನೆ ಅಭ್ಯಾಸದ ವೇಳೆ ತಂಡದ ಆಟಗಾರರನ್ನು ವೀಕ್ಷಿಸಲು ಪ್ರೇಕ್ಷಕರ ದಂಡೇ ಕಟಕ್ ಮೈದಾನದಲ್ಲಿ ಹಾಜರಿತ್ತು.
ಪಂದ್ಯ ನೋಡಲು ಬಂದವರಂತೆ ಪ್ರೇಕ್ಷಕರು ಆಟಗಾರರ ಅಭ್ಯಾಸ ವೀಕ್ಷಿಸಿ ತಮ್ಮ ಮೆಚ್ಚಿನ ಆಟಗಾರರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.