Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಈಗಷ್ಟೇ ಐಪಿಎಲ್ ಕೂಟ ಮುಗಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರು ಮುಂದಿನ ಆರು ತಿಂಗಳ ಮಟ್ಟಿಗೆ ಫುಲ್ ಬ್ಯುಸಿಯಾಗಲಿದ್ದಾರೆ.
ಇದೀಗ ದ.ಆಫ್ರಿಕಾ ವಿರುದ್ಧ ತವರಿನಲ್ಲಿ ಟಿ20 ಸರಣಿ ಆಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಅದಾದ ಬಳಿಕ ಐರ್ಲೆಂಡ್ ನಲ್ಲಿ ಟಿ20 ಸರಣಿ ಆಡಲಿದ್ದಾರೆ. ಅಕ್ಟೋಬರ್-ನವಂಬರ್ ಅವಧಿಯಲ್ಲಿ ಬರುವ ಟಿ20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರು ಸುಮಾರು 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದ್ದಾರೆ.
ಇದರ ನಡುವೆ ಇಂಗ್ಲೆಂಡ್ ನಲ್ಲಿ ಏಕೈಕ ಟೆಸ್ಟ್ ಆಡಲಿದೆ. ಟಿ20 ವಿಶ್ವಕಪ್ ಗೆ ಮುನ್ನ ದ.ಆಫ್ರಿಕಾ, ಐರ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದೆ. ಹೀಗಾಗಿ ಮುಂದಿನ ಆರು ತಿಂಗಳ ಕಾಲ ಟೀಂ ಇಂಡಿಯಾ ಬಿಡುವಿಲ್ಲದ ಕ್ರಿಕೆಟ್ ಆಡಲಿದೆ.