Publish Date: Wed, 01 Jun 2022 (16:38 IST)
Updated Date: Wed, 01 Jun 2022 (16:40 IST)
ರಾಂಚಿ: ಅಭಿಮಾನಿಗಳ ಪಾಲಿನ ಪ್ರೀತಿಯ ತಲಾ ಧೋನಿ ಅಂಗವಿಕಲ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಈ ಕ್ಷಣ ಧೋನಿ ನಡೆದುಕೊಂಡ ರೀತಿ ಬಗ್ಗೆ ಆ ಅಭಿಮಾನಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಅನುಭವ ಹಂಚಿಕೊಂಡಿದ್ದಾರೆ.
ಚೆನ್ನೈಗೆ ವಿಮಾನವೇರಲು ನಿಲ್ದಾಣಕ್ಕೆ ಬಂದಿದ್ದಾಗ ತಮಗಾಗಿ ಕಾದಿದ್ದ ಅಂಗವಿಕಲ ಅಭಿಮಾನಿ ಲಾವಣ್ಯ ಎಂಬವರನ್ನು ಭೇಟಿಯಾಗಿದ್ದಾರೆ. ಆ ಕ್ಷಣ ಧೋನಿ ನಡೆದುಕೊಂಡ ಬಗ್ಗೆ ಲಾವಣ್ಯ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ದಿನವನ್ನು ನಾನು ಎಂದಿಗೂ ಮರೆಯಲಾರೆ. ಅವರು ನನ್ನ ಬಳಿ ವಿನಯವಾಗಿ ಮಾತನಾಡಿಸಿದರು. ನನ್ನ ಹೆಸರಿನ ಸ್ಪೆಲ್ಲಿಂಗ್ ಕೇಳಿದರು. ಬಳಿಕ ಅಳಬಾರದು ಎಂದು ಕಣ್ಣೀರೊರೆಸಿದರು. ಅವರಿಗೆ ನಾನು ಮಾಡಿದ ಚಿತ್ರ ನೀಡಿದ್ದೆ. ಅದನ್ನು ನೋಡಿ ತುಂಬಾ ಚೆನ್ನಾಗಿದೆ ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎಂದರು. ಅವರು ನನಗಾಗಿ ನೀಡಿದ ಆ ಕೆಲವು ಕ್ಷಣಗಳನ್ನು ಎಂದಿಗೂ ಮರೆಯಲಾರೆ ಎಂದಿದ್ದಾರೆ ಲಾವಣ್ಯ.