ವಿಶಾಖಪಟ್ಟಣಂ: ದ.ಆಫ್ರಿಕಾ ವಿರುದ್ಧ ಮೂರನೇ ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ ಕೊನೆಗೂ ಸರಣಿ ಜೀವಂತವಾಗಿರಿಸಿದೆ. ಭಾರತದ ಪರ ಬೌಲರ್ ಗಳು ಈ ಪಂದ್ಯದಲ್ಲಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಆರಂಭಿಕರಾದ ಋತುರಾಜ್ ಗಾಯಕ್ ವಾಡ್ 57, ಇಶಾನ್ ಕಿಶನ್ 54 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಮಧ‍್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮತ್ತೆ ಕೈಕೊಟ್ಟರು. ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 21 ಎಸೆತಗಳಲ್ಲಿ 31 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ಗಳಿಸಲು ನೆರವಾದರು.
ಈ ಮೊತ್ತ ಬೆನ್ನತ್ತಿದ ಆಫ್ರಿಕಾಗೆ ಅಕ್ಸರ್ ಪಟೇಲ್ ಮತ್ತು ಹರ್ಷಲ್ ಪಟೇಲ ಆರಂಭಿಕ ಆಘಾತ ನೀಡಿದರು. ಬಳಿಕ ಯಜುವೇಂದ್ರ ಚಾಹಲ್ ಮಧ್ಯಮ ಕ್ರಮಾಂಕದ ಬೆನ್ನುಲುಬು ಮುರಿದರು. ಕಳೆ ಕ್ರಮಾಂಕದ ಬ್ಯಾಟಿಗರನ್ನು ಪೆವಿಲಿಯನ್ ಗಟ್ಟಿದ ಕೀರ್ತಿ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ರದ್ದು. ಇದರಿಂದಾಗಿ ಆಫ್ರಿಕಾ 19.1 ಓವರ್ ಗಳಲ್ಲಿ 131 ರನ್ ಗಳಿಗೆ ಆಲೌಟ್ ಆದರು. ಭಾರತಕ್ಕೆ 48 ರನ್ ಗಳ ಗೆಲುವು ಸಿಕ್ಕಿತು. ಚಾಹಲ್ 3, ಹರ್ಷಲ್ ಪಟೇಲ್ 4 ಮತ್ತು ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು.