Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಟಕ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಇಂದು ಬ್ಯಾಟಿಗರು ಕೈಕೊಟ್ಟರು. ಪರಿಣಾಮ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಂದು ಮತ್ತೊಮ್ಮೆ ಟಾಸ್ ಸೋತ ರಿಷಬ್ ಪಂತ್ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಋತುರಾಜ್ ಗಾಯಕ್ ವಾಡ್ ಕೇವಲ 1 ರನ್ ಗೇ ಔಟಾದರು. ಇಶಾನ್ ಕಿಶನ್ 34 ರನ್ ಗಳಿಸಿದರೆ ಶ್ರೇಯಸ್ ಅಯ್ಯರ್ 40 ರನ್ ಗಳಿಸಿದರು. ಆದರೆ ರಿಷಬ್ ಪಂತ್ (5), ಹಾರ್ದಿಕ್ ಪಾಂಡ್ಯ (9) ವಿಫಲರಾಗಿದ್ದು ಭಾರತಕ್ಕೆ ಮುಳುವಾಯಿತು.
ಫಿನಿಶರ್ ರೋಲ್ ಗಾಗಿಯೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದರು. 21 ಎಸೆತಗಳಲ್ಲಿ 30 ರನ್ ಗಳಿಸಿದ ದಿನೇಶ್ ತಂಡದ ಮೊತ್ತವನ್ನು 148 ಕ್ಕೆ ಏರಿಸುವಲ್ಲಿ ಸಹಾಯ ಮಾಡಿದರು. ಇನ್ನೀಗ ಬೌಲರ್ ಗಳು ಬಿಗುವಿನ ದಾಳಿ ನಡೆಸಿ ಟೀಂ ಇಂಡಿಯಾ ಕಾಪಾಡಬೇಕಿದೆ.