Publish Date: Thu, 28 Oct 2021 (09:10 IST)
Updated Date: Thu, 28 Oct 2021 (09:11 IST)
ದುಬೈ: ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಟಾಸ್ ಗೆದ್ದವರೇ ಬಾಸ್ ಎನ್ನುವ ಪರಿಸ್ಥಿತಿಯಾಗಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ತಂಡವೇ ಗೆಲ್ಲುವುದು ಸಾಮಾನ್ಯವಾಗಿದೆ.
ಇದರಿಂದಾಗಿ ಟಾಸ್ ಗೆದ್ದ ತಂಡವೇ ಪಂದ್ಯವನ್ನೂ ಗೆಲ್ಲುತ್ತಿದೆ. ಅರಬರ ನಾಡಿನ ನಿಧಾನಗತಿಯ ಪಿಚ್ ನಲ್ಲಿ ರಾತ್ರಿ ಮಂಜಿನ ಹನಿಯೂ ಬೌಲರ್ ಗಳಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಮೊದಲು ಫೀಲ್ಡಿಂಗ್ ಮಾಡಿದ ತಂಡವೇ ಗೆಲುವು ಕಾಣುತ್ತಿದೆ.
ಇದಕ್ಕೆ ಉದಾಹರಣೆಯೆಂದರೆ ಭಾರತ-ಪಾಕಿಸ್ತಾನ ಪಂದ್ಯ, ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯ, ವೆಸ್ಟ್ ಇಂಡೀಸ್-ದ.ಆಫ್ರಿಕಾ ಪಂದ್ಯ, ದ.ಆಫ್ರಿಕಾ-ಆಸ್ಟ್ರೇಲಿಯಾ ಪಂದ್ಯಗಳು. ಇವೆಲ್ಲದರಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದವರೇ ಗೆದ್ದಿದ್ದಾರೆ. ಹೀಗಾಗಿ ಈ ಕೂಟದಲ್ಲಿ ಟಾಸ್ ನಿರ್ಣಾಯಕವಾಗಲಿದೆ.