Publish Date: Thu, 11 Nov 2021 (16:26 IST)
Updated Date: Thu, 11 Nov 2021 (16:28 IST)
ದುಬೈ: ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂದು ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆದರೆ ಈ ಮಹತ್ವದ ಪಂದ್ಯಕ್ಕೆ ಮುನ್ನ ಪಾಕಿಸ್ತಾನದ ಇಬ್ಬರು ಆಟಗಾರರಲ್ಲಿ ಜ್ವರ ಕಾಣಿಸಿಕೊಂಡಿದೆ.
ಹಿರಿಯ ಕ್ರಿಕೆಟಿಗ ಶೊಯೇಬ್ ಮಲಿಕ್, ಆರಂಭಿಕ ಮೊಹಮ್ಮದ್ ರಿಜ್ವಾನ್ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಇಬ್ಬರ ಕೊರೋನಾ ವರದಿ ನೆಗೆಟಿವ್ ಬಂದಿದೆ. ಇದೀಗ ಇಬ್ಬರೂ ಆಡಲು ಫಿಟ್ ಎಂದು ವೈದ್ಯಕೀಯ ತಂಡ ಘೋಷಿಸಿದೆ.
ಜ್ವರದಿಂದಾಗಿ ಇಬ್ಬರೂ ಆಟಗಾರರೂ ನಿನ್ನೆಯ ಅಭ್ಯಾಸಕ್ಕೆ ಗೈರಾಗಿದ್ದರು. ಆದರೆ ಇಂದು ಆಟಕ್ಕೆ ಮುನ್ನ ಇಬ್ಬರೂ ಫಿಟ್ ಎಂದು ಘೋಷಿಸಲಾಗಿದೆ.