Publish Date: Thu, 11 Nov 2021 (08:46 IST)
Updated Date: Thu, 11 Nov 2021 (09:00 IST)
ಮುಂಬೈ: ಟಿ20 ತಂಡಕ್ಕೆ ರೋಹಿತ್ ಶರ್ಮಾರನ್ನು ನಾಯಕನಾಗಿ ನಿಯುಕ್ತಿಗೊಳಿಸಿರುವ ಬಿಸಿಸಿಐ ಆಯ್ಕೆಗಾರರು ಕೆಎಲ್ ರಾಹುಲ್ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾರೆ.
ಪ್ರತಿಭಾವಂತ ಬ್ಯಾಟರ್ ರಾಹುಲ್ ರನ್ನು ಉಪ ನಾಯಕನಾಗಿ ಮಾಡಲಾಗಿದೆ. ಅಂದರೆ ಮುಂದೆ ರೋಹಿತ್ ಬಳಿಕ ಕೆಎಲ್ ರಾಹುಲ್ ರನ್ನು ನಾಯಕರಾಗಿ ಪಳಗಿಸುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.
ಹೇಗಿದ್ದರೂ ರೋಹಿತ್ ಗೆ 34 ವರ್ಷವಾಗಿದೆ. ಹೀಗಾಗಿ ಟೀಂ ಇಂಡಿಯಾ ಮುಂದಿನ ನಾಯಕನನ್ನು ತಯಾರು ಮಾಡಬೇಕಿದೆ. ಅದಕ್ಕಾಗಿ ಈಗಲೇ ರಾಹುಲ್ ನಾಯಕ ಎಂಬುದನ್ನು ಪರೋಕ್ಷ ಸಂದೇಶವನ್ನು ಬಿಸಿಸಿಐ ನೀಡಿದೆ.