Publish Date: Thu, 04 Aug 2022 (08:40 IST)
Updated Date: Thu, 04 Aug 2022 (09:22 IST)
ಮುಂಬೈ: ಐಸಿಸಿ ಬಿಡುಗಡೆಗೊಳಿಸಿರುವ ಲೇಟೆಸ್ಟ್ ಟಿ20 ಶ್ರೇಯಾಂಕದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ 2 ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಬ್ಯಾಟಿಗರ ಪಟ್ಟಿಯಲ್ಲಿ ಭಾರೀ ಬಡ್ತಿ ಪಡೆದಿರುವ ಭಾರತದ ಬ್ಯಾಟಿಗ 816 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಮೊದಲ ಸ್ಥಾನದಲ್ಲಿರುವ ಪಾಕ್ ನಾಯಕ ಬಾಬರ್ ಅಜಮ್ 818 ಅಂಕ ಹೊಂದಿದ್ದಾರೆ. 794 ಅಂಕ ಹೊಂದಿರುವ ಪಾಕ್ ಬ್ಯಾಟಿಗ ಮೊಹಮ್ಮದ್ ರಿಜ್ವಾನ್ ಮೂರನೇ ಸ್ಥಾನದಲ್ಲಿದ್ದಾರೆ.
ಕಳೆದ ಇಂಗ್ಲೆಂಡ್ ಟಿ20 ಸರಣಿ ವೇಳೆ ಶತಕ ಗಳಿಸಿ ಸರಣಿ ಶ್ರೇಷ್ಠರಾಗಿದ್ದ ಸೂರ್ಯಕುಮಾರ್ ಯಾದವ್ ಏಕಾಏಕಿ ಶ್ರೇಯಾಂಕದಲ್ಲಿ ಈ ಮಟ್ಟಿಗೆ ಬಡ್ತಿ ಪಡೆದಿರುವುದು ಪಾಕ್ ಅಭಿಮಾನಿಗಳಿಗೆ ಅಸೂಯೆ ತಂದಿದೆ. ಐಸಿಸಿ ಶ್ರೇಯಾಂಕದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಗಿಂತ ಮೊಹಮ್ಮದ್ ರಿಜ್ವಾನ್ ಹೆಚ್ಚು ರನ್, ಸರಾಸರಿ ಹೊಂದಿದ್ದಾರೆ. ಹಾಗಿದ್ದರೆ ಅವರು ಹೇಗೆ ಮೂರನೇ ಸ್ಥಾನಕ್ಕೆ ಜಾರಿದರು ಎಂದು ಪಾಕ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದು, ಇದು ಮೋಸ ಎನ್ನುತ್ತಿದ್ದಾರೆ.