Publish Date: Wed, 03 Aug 2022 (09:40 IST)
Updated Date: Wed, 03 Aug 2022 (09:53 IST)
ಸೈಂಟ್ ಕಿಟ್ಸ್: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅರ್ಧಕ್ಕೇ ಪೆವಿಲಿಯನ್ ಗೆ ಮರಳಿದ ರೋಹಿತ್ ಶರ್ಮಾ ತಮ್ಮ ಗಾಯದ ಬಗ್ಗೆ ಪಂದ್ಯದ ಬಳಿಕ ಅಪ್ ಡೇಟ್ ಕೊಟ್ಟಿದ್ದಾರೆ.
ಬೆನ್ನು ನೋವಿಗೊಳಗಾಗಿದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಅರ್ಧಕ್ಕೇ ಬಿಟ್ಟು ಪೆವಿಲಿಯನ್ ಗೆ ಮರಳಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್ ಕ್ರಿಕೆಟ್ ಆರಂಭವಾಗಲಿದ್ದು, ಆ ಸಂದರ್ಭಕ್ಕೆ ರೋಹಿತ್ ಫಿಟ್ ಆಗಿ ತಂಡಕ್ಕೆ ಮರಳಬೇಕಿದೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಅವರ ಗಾಯದ ಬಗ್ಗೆ ಆತಂಕವಾಗಿತ್ತು.
ಪಂದ್ಯದ ಬಳಿಕ ಮಾತನಾಡಿರುವ ರೋಹಿತ್ ನನ್ನ ಬೆನ್ನು ನೋವು ಗಂಭೀರವಲ್ಲ. ಏಷ್ಯಾ ಕಪ್ ಕ್ರಿಕೆಟ್ ಗೆ ಇನ್ನು ಕೆಲವು ದಿನಗಳು ಬಾಕಿಯಿರುವುದರಿಂದ ಅಷ್ಟರಲ್ಲಿ ಚೇತರಿಸಿಕೊಳ್ಳಬಹುದು ಎಂದಿದ್ದಾರೆ ರೋಹಿತ್. ಇದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.