ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅಧಿಕಾರಾವಧಿ ವಿಸ್ತರಣೆ ಕುರಿತಂತೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಲಿದೆ.
ಲೋಧಾ ಸಮಿತಿ ಶಿಫಾರಸ್ಸಿನನ್ವಯ ಗಂಗೂಲಿ ಅಧಿಕಾರಾವಧಿ ಇನ್ನು ಆರು ತಿಂಗಳಿಗೆ ಮುಗಿಯಬೇಕಿದೆ. ಆದರೆ ಗಂಗೂಲಿ ಪುನರಾಯ್ಕೆ ಬಯಸಿದ್ದು, ಇದಕ್ಕೆ ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕಿದೆ.
ಈ ಹಿನ್ನಲೆಯಲ್ಲಿ ಗಂಗೂಲಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದು ನಡೆಯಲಿದ್ದು, ಗಂಗೂಲಿ ಜತೆಗೆ ಕಾರ್ಯದರ್ಶಿ ಜಯ್ ಶಾ ಅಧಿಕಾರಾವಧಿ ವಿಸ್ತರಣೆ ಕುರಿತಂತೂ ಕೋರ್ಟ್ ವಿಚಾರಣೆ ನಡೆಸಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಅಧಿಕಾರದಲ್ಲಿ ಮುಂದುವರಿಯಲು ಗಂಗೂಲಿಗೆ ಅವಕಾಶ ಕೊಟ್ಟರೆ ಅವರು ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಇಲ್ಲದೇ ಹೋದರೆ ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ‍್ಯತೆಯಿದೆ.