Publish Date: Fri, 20 Sep 2019 (09:40 IST)
Updated Date: Fri, 20 Sep 2019 (09:43 IST)
ಮುಂಬೈ: ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿಯಾಗಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಧೋನಿ ಇನ್ನು ನಿವೃತ್ತಿಯಾಗಲಿ ಎಂದು ಸಲಹೆ ನೀಡಿದ್ದಾರೆ.
ಧೋನಿ ಆಡಿದ್ದು ಸಾಕು, ಇನ್ನು ನಿವೃತ್ತಿಯಾಗಲಿ ಎಂದು ಕ್ರಿಕೆಟ್ ದಿಗ್ಗಜ ಅಭಿಪ್ರಾಯಪಟ್ಟಿದ್ದಾರೆ. ಧೋನಿ ನಿವೃತ್ತಿ ಬಗ್ಗೆ ಕೇಳಿಬರುತ್ತಿರುವ ಹಲವು ಊಹಾಪೋಹಗಳಿಗೆ ಅವರೇ ಉತ್ತರಿಸಬೇಕಷ್ಟೇ ಎಂದೂ ಗವಾಸ್ಕರ್ ಹೇಳಿದ್ದಾರೆ.
‘ಧೋನಿಯ ಮನಸ್ಸಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ. ಅವರ ಭವಿಷ್ಯವನ್ನು ಮತ್ತು ಭಾರತ ಕ್ರಿಕೆಟ್ ತಂಡದ ಮುಂದಿನ ಭವಿಷ್ಯವನ್ನು ಅವರೇ ನಿರ್ಧರಿಸಬೇಕಷ್ಟೇ. ನನ್ನ ಪ್ರಕಾರ ಧೋನಿಗೆ ಈಗ 38 ವರ್ಷ, ಇನ್ನು ಅವರು ನಿವೃತ್ತಿಯಾಗಿ, ಮುಂಬರುವ ಟಿ20 ವಿಶ್ವಕಪ್ ಗೆ ಹೊಸ ವಿಕೆಟ್ ಕೀಪರ್ ತಯಾರಾಗಲು ಈಗಲೇ ವೇದಿಕೆ ಸೃಷ್ಟಿಸುವುದು ಒಳ್ಳೆಯದು’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.