Publish Date: Fri, 20 Sep 2019 (09:06 IST)
Updated Date: Fri, 20 Sep 2019 (09:09 IST)
ಮುಂಬೈ: ಧೋನಿಗೆ ವಿಶ್ರಾಂತಿ ನೀಡಿ ಟೀಂ ಇಂಡಿಯಾಗೆ ಹೊಸ ವಿಕೆಟ್ ಕೀಪರ್ ನನ್ನು ತಯಾರು ಮಾಡಲು ರಿಷಬ್ ಪಂತ್ ಗೆ ಎಷ್ಟೇ ಅವಕಾಶ ಕೊಟ್ಟರೂ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದನ್ನು ನೋಡಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಾಗಲೀ ಇದೀಗ ನಡೆಯುತ್ತಿರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯಾಗಲಿ ರಿಷಬ್ ಪಂತ್ ಕಳಪೆ ಬ್ಯಾಟಿಂಗ್ ಮುಂದುವರಿದಿದೆ. ಅವರು ಸುಧಾರಿಸುವ ಲಕ್ಷಣವೇ ತೋರದಿರುವುದನ್ನು ನೋಡಿ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.
ಕೂಡ್ಲೇ ಧೋನಿಯನ್ನು ವಾಪಸ್ ಕರೆಸಿ ಎಂದು ಒತ್ತಾಯಿಸಿದ್ದಾರೆ. ರಿಷಬ್ ಪಂತ್ ಪ್ರದರ್ಶನ ನೋಡಿ ಸಾಕಾಗಿದೆ. ಭಾರತಕ್ಕೆ ಈಗ ಧೋನಿಯ ಅಗತ್ಯವಿದೆ. ತಕ್ಷಣವೇ ಅವರನ್ನು ವಾಪಸ್ ಕರೆಸಿ ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.