ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಏಕಾಂಗಿ ಹೋರಾಟ ನಡೆಸಿ ದ್ವಿಶತಕ ಭಾರಿಸಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಸ್ಮಿತ್ ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳು ವಿಫಲವಾದಾಗ ಏಕಾಂಗಿ ಹೋರಾಟ ನಡೆಸಿದ್ದು ಬರೋಬ್ಬರಿ 319 ಎಸೆತ ಎದುರಿಸಿ 24 ಬೌಂಡರಿ 2 ಸಿಕ್ಸರ್ ಗಳೊಂದಿಗೆ 211 ರನ್ ಗಳಿಸಿದ್ದಾರೆ. ಇದರಿಂದಾಗಿ ಆಸೀಸ್ 497 ಕ್ಕೆ 8 ವಿಕೆಟ್ ಕಳೆದುಕೊಂಡಾಗ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ.
ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಟೀವ್ ಸ್ಮಿತ್ ರ 3 ನೇ ದ್ವಿಶತಕವಾಗಿದೆ. ಶತಕದ ಪಟ್ಟಿಯಲ್ಲಿ ಈಗಾಗಲೇ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು (25 ಶತಕ) ಹಿಂದಿಕ್ಕಿದ್ದಾರೆ. ಸ್ಮಿತ್ ಈಗ 26 ಶತಕ ಗಳಿಸಿದ್ದಾರೆ. ಬಾಲ್ ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾದ ಬಳಿಕ ಮರಳಿ ಮೈದಾನಕ್ಕೆ ಬಂದ ಸ್ಮಿತ್ ಈಗ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.