ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದಾಗ ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್ ಸ್ಮಿತ್ ಒಂದು ವರ್ಷ ನಿಷೇಧ ಶಿಕ್ಷೆಗೊಳಗಾಗಿದ್ದು ಎಲ್ಲರಿಗೂ ಗೊತ್ತೇ ಇದೆ.
ಈ ಪ್ರಕರಣ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿತ್ತು. ನಾಯಕ ಸ್ಮಿತ್ ಜತೆ ಉಪನಾಯಕ ಡೇವಿಡ್ ವಾರ್ನರ್, ಸಹ ಕ್ರಿಕೆಟಿಗ ಬೆನ್ ಕ್ರಾಫ್ಟ್ ನಿಷೇಧಕ್ಕೊಳಗಾಗಿದ್ದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಮಿತ್ ಕಣ್ಣೀರು ಮಿಡಿಯುತ್ತಾ ಕ್ಷಮೆ ಯಾಚಿಸಿದ್ದರು. ಇದಾದ ಬಳಿಕವೂ ನಾಲ್ಕು ದಿನಗಳ ನಿರಂತರವಾಗಿ ಸ್ಮಿತ್ ಅಳುತ್ತಲೇ ಇದ್ದರಂತೆ. ಹಾಗಂತ ಅವರೇ ಸಿಡ್ನಿಯ ಶಾಲಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಬಹಿರಂಗಪಡಿಸಿದ್ದಾರೆ. ಮನದೊಳಿಗನ ಭಾವನೆಗಳನ್ನು ಮುಕ್ತವಾಗಿ ಹೊರಹಾಕಬೇಕು ಎಂದೂ ಅವರು ಈ ಸಂದರ್ಭದಲ್ಲಿ ಮಕ್ಕಳಿಗೆ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.