ಮುಂಬೈ: ದೆಹಲಿಯಲ್ಲಿ ಇಂದು ಅನಾವರಣಗೊಳ್ಳಲಿರುವ ತಮ್ಮ ಮೇಣದ ಪ್ರತಿಮೆ ಎದುರು ಸೆಲ್ಫೀ ತೆಗೆಸಿಕೊಳ್ಳುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ.
‘ಜೂನ್ 6 ಕ್ಕೆ ಬನ್ನಿ. ವ್ಯಾಕ್ಸ್ ಸ್ಟ್ಯಾಚ್ಯೂ ಎದುರು ಆಡೋಣ. ಮಡೇಮ್ ಟುಸಾಡೆಯಲ್ಲಿ ಇರಲು ಉತ್ಸುಕನಾಗಿದ್ದೇನೆ’ ಎಂದು ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಇದಕ್ಕೆ ವಿರಾಟ್ ಕೊಹ್ಲಿ ಕಾಲೆಳೆದಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ‘ನಿಜವಾದ ರನ್ ಮೆಷಿನ್ ಜತೆಗೆ ನಿಂತು ಫೋಟೋ ತೆಗೆಸಿಕೊಳ್ಳುವ ಅವಕಾಶ ನನಗೆ ಸಿಗಬಹುದೇ?’ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಕೊಹ್ಲಿ ಇನ್ನೂ ಮರಳಿ ಪ್ರತಿಕ್ರಿಯೆ ನೀಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.