Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್: ಪ್ರಕರಣ ಬೆಳಕಿಗೆ ಬಂದಿದ್ದು ಆ ಒಂದು ಸಾವಿನಿಂದ!

ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್:  ಪ್ರಕರಣ ಬೆಳಕಿಗೆ ಬಂದಿದ್ದು ಆ ಒಂದು ಸಾವಿನಿಂದ!
ಚೆನ್ನೈ , ಮಂಗಳವಾರ, 17 ಸೆಪ್ಟಂಬರ್ 2019 (10:24 IST)
ಚೆನ್ನೈ: ಐಪಿಎಲ್ ಬಳಿಕ ಇದೀಗ ತಮಿಳುನಾಡು ಟಿ20 ಪ್ರೀಮಿಯರ್ ಲೀಗ್ ನಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ವರದಿ ಬಂದಿದೆ. ಈ ಬಗ್ಗೆ ಇದೀಗ ಬಿಸಿಸಿಐ ತನಿಖೆಗೆ ಮುಂದಾಗಿದೆ.


ತಮಿಳುನಾಡು ರಾಜ್ಯ ಪ್ರೀಮಿಯರ್ ಲೀಗ್ ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುವ ರವಿಚಂದ್ರನ್ ಅಶ್ವಿನ್, ಅಭಿನವ್ ಮುಕುಂದ್ ಅವರಂತಹ ಆಟಗಾರರೂ ಪಾಲ್ಗೊಂಡಿದ್ದರು.

ಈ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಇದೀಗ ಅನಾಮಧೇಯ ವ್ಯಕ್ತಿಯೊಬ್ಬ ಕ್ರಿಕೆಟಿಗರಿಗೆ ವ್ಯಾಟ್ಸಪ್ ಸಂದೇಶ ನೀಡಿ ಆಮಿಷವೊಡ್ಡಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಪಡೆ ತನಿಖೆಗೆ ಮುಂದಾಗಿದೆ. ಇದರಲ್ಲಿ ಹಲವು ರಣಜಿ ಕ್ರಿಕೆಟಿಗರು, ಕೋಚ್ ಗಳೂ ಭಾಗಿಯಾಗಿದ್ದಾರೆ ಎಂಬ ಗುಮಾನಿ ಬಂದಿದೆ.

ಅಷ್ಟಕ್ಕೂ ಈ ಪ್ರಕರಣ ಬೆಳಕಿಗೆ ಬರಲು ಕಾರಣ ಒಂದು ಫ್ರಾಂಚೈಸಿ ಮಾಲಿಕ ವಿಬಿ ಚಂದ್ರಶೇಖರ್ ಎಂಬವರು ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಪ್ರಕರಣದ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ತನಿಖೆ ನಡೆಸಿದಾಗ ಈ ಸ್ಪಾಟ್ ಫಿಕ್ಸಿಂಗ್ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಚೀನಾ ಓಪನ್: ಸಿಂಧು, ಸೈನಾ ಮೇಲೆ ಎಲ್ಲರ ಕಣ್ಣು