Publish Date: Sat, 27 May 2023 (17:02 IST)
Updated Date: Sat, 27 May 2023 (17:04 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ, ಗುಜರಾತ್ ಟೈಟನ್ಸ್ ಪರ ಆಡುವ ಸ್ಟಾರ್ ಬ್ಯಾಟಿಗ ಶುಬ್ಮನ್ ಗಿಲ್ ಮತ್ತು ನಟಿ ಸಾರಾ ಅಲಿ ಖಾನ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅವರೀಗ ಬ್ರೇಕಪ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇತ್ತೀಚೆಗೆ ಐಪಿಎಲ್ ಪಂದ್ಯದ ನಡುವೆ ಗಿಲ್ ರನ್ನು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಸಾರಾ ಅಲಿ ಖಾನ್ ಹರಟಿದ ಫೋಟೋವೊಂದು ವೈರಲ್ ಆಗಿತ್ತು. ಆದರೆ ಈಗ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿಕೊಂಡಿದ್ದು ಇಬ್ಬರೂ ಬ್ರೇಕಪ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಇದಕ್ಕೆ ಮೊದಲು ಗಿಲ್ ಹೆಸರು ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜೊತೆ ಥಳುಕು ಹಾಕಿಕೊಂಡಿತ್ತು. ಆದರೆ ಇಬ್ಬರೂ ಬ್ರೇಕಪ್ ಆಗಿದ್ದರು ಎನ್ನಲಾಗಿತ್ತು. ಅದಾದ ಬಳಿಕ ಗಿಲ್ ಸಾರಾ ಅಲಿ ಖಾನ್ ಜೊತೆ ಸ್ನೇಹ ಹೊಂದಿದ್ದರು.