Publish Date: Fri, 26 May 2023 (09:47 IST)
Updated Date: Fri, 26 May 2023 (09:51 IST)
ದಿ ಓವಲ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವಾಡಲು ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ತೆರಳಿರುವ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ.
ದ್ರಾವಿಡ್ ಜೊತೆಗೆ ಕೆಲವು ಆಟಗಾರರ ಗುಂಪು ಇಂಗ್ಲೆಂಡ್ ಗೆ ತೆರಳಿತ್ತು. ಇವರೀಗ ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೆ ಮೊದಲು ಬಿಸಿಸಿಐ ಕ್ರಿಕೆಟಿಗರ ಹೊಸ ಟ್ರೈನಿಂಗ್ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಈ ಸರಣಿಯಿಂದ ಟೀಂ ಇಂಡಿಯಾ ಜೆರ್ಸಿಯ ಸ್ಪಾನ್ಸರ್ ಶಿಪ್ ನ್ನು ಮುಂದಿನ ಐದು ವರ್ಷಗಳವರೆಗೆ ಆಡಿಡಾಸ್ ಪಡೆದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.