ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗದೇ ಇದ್ದರೂ ಶಿಖರ್ ಧವನ್ ಇದೀಗ ಟೀಂ ಇಂಡಿಯಾ ತಂಗಿರುವ ಹೋಟೆಲ್ ರೂಂನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಧವನ್ ತಂಡದಲ್ಲಿಲ್ಲದೇ ಇದ್ದರೂ ತಮ್ಮ ಕಿಟ್ ಬ್ಯಾಗ್ ಸಮೇತ ತಂಡ ತಂಗಿರುವ ಹೋಟೆಲ್ ನಲ್ಲಿ ಕಾಣಿಸಿಕೊಂಡಿರುವುದು ಟೀಂ ಇಂಡಿಯಾ ಆರಂಭಿಕರ ಬದಲಾವಣೆಯ ಸೂಚನೆ ನೀಡಿದೆ.
ಈಗಾಗಲೇ ಗಾಯಗೊಂಡಿರುವ ಪೃಥ್ವಿ ಶಾ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ರನ್ನು ಕರೆಸಿಕೊಳ್ಳಲಾಗಿದೆ. ಸದ್ಯಕ್ಕೆ ಟೀಂ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ಇಬ್ಬರೂ ಕಳಪೆ ಆಟವಾಡಿದ್ದಾರೆ. ಹೀಗಾಗಿ ಧವನ್ ಗೆ ಅವಕಾಶ ನೀಡಿ ಭಾರತದ ಆರಂಭಿಕರ ಸಮಸ್ಯೆ ನೀಗಿಸುವ ಯೋಜನೆ ರೂಪಿಸುತ್ತಿದೆಯಾ ಎಂಬ ಅನುಮಾನ ಕಾಡಿದೆ. ಆದರೆ ಈ ಬಗ್ಗೆ ಟೀಂ ಇಂಡಿಯಾದಿಂದ ಅಧಿಕೃತ ಮಾಹಿತಿ ಬಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ