Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬರ್ತ್ ಡೇ ದಿನವೇ ಪತ್ನಿ ಬಳಿ ಸಾರಿ ಕೇಳಿದ ಕ್ರಿಕೆಟಿಗ ರೋಹಿತ್ ಶರ್ಮಾ

ಬರ್ತ್ ಡೇ ದಿನವೇ ಪತ್ನಿ ಬಳಿ ಸಾರಿ ಕೇಳಿದ ಕ್ರಿಕೆಟಿಗ ರೋಹಿತ್ ಶರ್ಮಾ
ಮುಂಬೈ , ಶನಿವಾರ, 22 ಡಿಸೆಂಬರ್ 2018 (09:19 IST)
ಮುಂಬೈ: ಸದ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.


ರಿತಿಕಾ ಜತೆ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳಲು ಸಾಧ್ಯವಾಗದ್ದಕ್ಕೆ ಅವರಿಗೆ ಬೇಸರವಿದೆ. ಆದರೆ ರೋಹಿತ್ ಕ್ಷಮೆ ಯಾಚಿಸಿದ್ದು ಈ ವಿಚಾರಕ್ಕಲ್ಲ.

ಆಸ್ಟ್ರೇಲಿಯಾಕ್ಕೆ ಬಂದ ಮೇಲೆ ರೋಹಿತ್ ಬ್ಯಾಟ್ ಸದ್ದು ಮಾಡಲಿಲ್ಲ. ವಿಂಡೀಸ್ ವಿರುದ್ಧ ತೋರಿದ್ದ ಭರ್ಜರಿ ಆಟವನ್ನು ಆಸ್ಟ್ರೇಲಿಯಾದಲ್ಲಿ ತೋರಿಸಲು ವಿಫಲರಾದ ರೋಹಿತ್ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಗಾಯಗೊಂಡು ತಂಡದಿಂದಲೇ ಹೊರಗುಳಿದಿದ್ದರು.

ಹೀಗಾಗಿ ರೋಹಿತ್ ಪತ್ನಿ ಬಳಿ ಕ್ಷಮೆ ಯಾಚಿಸಿದ್ದು, ಮುಂದಿನ ದಿನಗಳಲ್ಲಿ ನಿನ್ನನ್ನು ಮನರಂಜಿಸುತ್ತಿರುತ್ತೇನೆ ಎಂದು ಭರವಸೆ ನೀಡಿದ್ದಾರೆ. ರೋಹಿತ್ ಪತ್ನಿಗೆ ಕೊಟ್ಟ ಮಾತು ಉಳಿಸಿಕೊಂಡರೆ ಭಾರತಕ್ಕೂ ಕ್ಷೇಮ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳನಿಗೊಂದು ಪಿಳ್ಳೆ ನೆವ! ಕಳೆದ ಐಪಿಎಲ್ ನಲ್ಲಿ ಫೇಲ್ ಆಗಿದ್ದಕ್ಕೆ ಯುವರಾಜ್ ಸಿಂಗ್ ನೆಪ