ಪರ್ತ್: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ನಡುವೆ ಬಹಿರಂಗ ಕಿತ್ತಾಟ ನಡೆದಿದ್ದು ಗೊತ್ತೇ ಇದೆ. ಆದರೆ ಅವರಿಬ್ಬರ ನಡುವೆ ಏನು ಮಾತುಕತೆ ನಡೆಯಿತು ಎಂಬುದು ಇದೀಗ ಬಯಲಾಗಿದೆ.
ಡ್ರಿಂಕ್ಸ್ ಬ್ರೇಕ್ ನಲ್ಲಿ ಇಶಾಂತ್ ಜಡೇಜಾ ಕಡೆ ತಿರುಗಿ ‘ನನ್ನ ಕಡೆಗೆ ಕೈ ತೋರಿಸಬೇಡಾ.. ನನ್ನ ಬಳಿಯೇ ವೇಗವಾಗಿ ಮಾಡು ಎಂದು ನನ್ನ ಹಿಂದಿನಿಂದ ಹೇಳುತ್ತಾನೆ’ ಎಂದು ಹೇಳುತ್ತಾರೆ.
ಆಗ ಜಡೇಜಾ ‘’ನನಗೂ ಇದು ಇಷ್ಟವಿಲ್ಲ. ನಾನೂ ತಂಡದ ಭಾಗವೇ. ನೀನ್ಯಾಕೆ ಅತಿಯಾಗಿ ಮಾತಾಡ್ತಿದ್ದೀಯಾ?’ ಎಂದು ಇಶಾಂತ್ ಗೆ ತಿರುಗೇಟು ಕೊಡುತ್ತಾರೆ. ಇದಕ್ಕೆ ‘ನನ್ನ ಕಡೆಗೆ ಕೈ ತೋರಿಸಬೇಡ. ನಿನ್ನ ಕೋಪವನ್ನು ನನ್ನ ಮೇಲೆ ತೋರಿಸಬೇಡ. ನಿನ್ನ ಕೋಪವನ್ನು ನಿನಗೇ ತಿರುಗಿಸಿಕೊಡಬಲ್ಲೆ’ ಎಂದು ಇಶಾಂತ್ ಕೂಗಾಡುತ್ತಾರೆ.
‘ನಿನ್ನದನ್ನು ನಿನ್ನ ಬಳಿಯೇ ಇಟ್ಟುಕೋ..ನನಗೆ ತೋರಿಸಬೇಡ’ ಎಂದು ಕೆಟ್ಟದಾಗಿ ಬಯ್ಯುತ್ತಾರೆ. ಇದಕ್ಕೆ ಇಶಾಂತ್ ಕೂಡಾ ‘ನನ್ನ ಬಳಿ ಮಾತಾಡಬೇಡ’ ಎಂದು ಕೂಗಾಡುತ್ತಾರೆ. ಈ ರೀತಿಯಾಗಿ ಇಬ್ಬರೂ ಕಚ್ಚಾಡುತ್ತಿರಬೇಕಾದರೆ ಮಧ್ಯೆ ಬರುವ ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಸಮಾಧಾನಪಡಿಸುತ್ತಾರೆ. ಇವಿಷ್ಟು ಆ ದಿನ ನಡೆದ ಘಟನೆ. ಆದರೆ ಒಂದೇ ತಂಡದ ಇಬ್ಬರೂ ಈ ರೀತಿ ಕಚ್ಚಾಡಿ ತಂಡದ ಮಾನ ಬಹಿರಂಗವಾಗಿ ಹರಾಜು ಹಾಕಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ