ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಶಿಖರ್ ಧವನ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾದರು.
ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಆರಂಭ ದೊರಕಿಸಿ 44 ರನ್ ಗಳಿಗೆ ಧವನ್ ಔಟಾದರು. ಅದೂ ಸ್ಟಂಪ್ ಔಟ್. ಈ ರೀತಿ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ನಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಧವನ್ 66 ವರ್ಷಗಳ ಬೇಡದ ದಾಖಲೆಯೊಂದನ್ನು ಮೈಮೇಲೆಳೆದುಕೊಂಡರು.
ಈ ರೀತಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಔಟಾದ ವಿಶ್ವದ ಮೂರನೇ ಆಟಗಾರ ಎಂಬ ಕುಖ್ಯಾತಿಗೆ ಧವನ್ ಪಾತ್ರರಾದರು. ಇದಕ್ಕೂ ಮೊದಲು ಭಾರತದವರೇ ಆದ ಪಂಕಜ್ ರಾಯ್ ಮತ್ತು ಪಾಕಿಸ್ತಾನದ ಮುಷ್ತಾಕ್ ಅಲಿ ಈ ಕುಖ್ಯಾತಿಗೊಳಗಾಗಿದ್ದರು. ಇದೀಗ 66 ವರ್ಷದ ಬಳಿಕ ಧವನ್ ಈ ಕಳಪೆ ದಾಖಲೆ ತಮ್ಮದಾಗಿಸಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.