Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊದಲ ಇನಿಂಗ್ಸ್ ನಲ್ಲಿ ಕಳೆದುಕೊಂಡಿದ್ದನ್ನು ಎರಡನೇ ಇನಿಂಗ್ಸ್ ನಲ್ಲಿ ಪಡೆದ ವಿರಾಟ್ ಕೊಹ್ಲಿ

ಮೊದಲ ಇನಿಂಗ್ಸ್ ನಲ್ಲಿ ಕಳೆದುಕೊಂಡಿದ್ದನ್ನು ಎರಡನೇ ಇನಿಂಗ್ಸ್ ನಲ್ಲಿ ಪಡೆದ ವಿರಾಟ್ ಕೊಹ್ಲಿ
ಟ್ರೆಂಟ್ ಬ್ರಿಡ್ಜ್ , ಮಂಗಳವಾರ, 21 ಆಗಸ್ಟ್ 2018 (09:05 IST)
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಮೂರೇ ರನ್ ಗಳಿಂದ ಶತಕ ಮಿಸ್ ಮಾಡಿಕೊಂಡಾಗ ಅವರಷ್ಟೇ ಅವರ ಅಭಿಮಾನಿಗಳೂ ನಿರಾಸೆಗೊಂಡಿದ್ದರು.

ಆದರೆ ವಿರಾಟ್ ಮೊದಲನೆಯ ಇನಿಂಗ್ಸ್ ನಲ್ಲಿ ಕೈತಪ್ಪಿದ ಶತಕವನ್ನು ಎರಡನೇ ಇನಿಂಗ್ಸ್ ನಲ್ಲಿ ಭಾರಿಸುವ ಮೂಲಕ ನಿರಾಸೆ ಮರೆಸಿದರು. ಇದರೊಂದಿಗೆ ಭಾರತ ಇಂಗ್ಲೆಂಡ್ ಗೆಲ್ಲಲು 520 ರನ್ ಗಳ ಬೃಹತ್ ಗುರಿಯನ್ನೂ ನೀಡಿತು.

ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಷ್ಟ ನಷ್ಟವಿಲ್ಲದೇ 23 ರನ್‍ ಗಳಿಸಿದೆ. ಇನ್ನೂ ಗೆಲುವಿಗೆ 498 ರನ್ ಗಳ ಅಗತ್ಯ ಅತಿಥೇಯರಿಗಿದೆ. ಭಾರತದ ದ್ವಿತೀಯ ಇನಿಂಗ್ಸ್ ನ ಇನ್ನೊಂದು ಹೈಲೈಟ್ ಎಂದರೆ ಹಾರ್ದಿಕ್ ಪಾಂಡ್ಯ ಅರ್ಧ ಶತಕ. ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಕಿತ್ತಿದ್ದ ಪಾಂಡ್ಯ ಅರ್ಧಶತಕವನ್ನೂ ಸಿಡಿಸುವ ಮೂಲಕ ತಾವೊಬ್ಬ ಆಲ್ ರೌಂಡರ್ ಎಂಬುದನ್ನು ಸಾಬೀತುಪಡಿಸಿದರು. ಮತ್ತೊಮ್ಮೆ ಅಂತಹದ್ದೇ ಪ್ರದರ್ಶನ ಸಾಬೀತುಪಡಿಸಿದರೆ ಟೀಂ ಇಂಡಿಯಾಕ್ಕೆ ಗೆಲುವು ಕಷ್ಟವಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ಕೂದಲೆಳೆಯಲ್ಲಿ ಎರಡು ಬಾರಿ ಅಪಾಯದಿಂದ ಪಾರಾದ ಚೇತೇಶ್ವರ ಪೂಜಾರ!