Publish Date: Tue, 31 Aug 2021 (09:44 IST)
Updated Date: Tue, 31 Aug 2021 (09:48 IST)
ಇಸ್ಲಾಮಾಬಾದ್: ಅಫ್ಘಾನಿಸ್ತಾನವನ್ನು ತಮ್ಮ ಕೈ ವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೊಗಳಿದ್ದಾರೆ. ಇದೇ ವಿಚಾರಕ್ಕೆ ಅವರೀಗ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.
ತಾಲಿಬಾನಿಗರು ಈಗ ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ. ಬದಲಾವಣೆಯೊಂದಿಗೆ ಬಂದಿದ್ದಾರೆ. ಅವರೀಗ ಮಹಿಳೆಯರಿಗೆ ಹೊರಗೆ ಹೋಗಲು ಅನುಮತಿ ನೀಡುತ್ತಿದ್ದಾರೆ. ಅವರು ಕ್ರಿಕೆಟ್ ನ್ನೂ ಇಷ್ಟಪಡುತ್ತಾರೆ ಮತ್ತು ಬೆಂಬಲಿಸುತ್ತಿದ್ದಾರೆ ಎಂದು ಅಫ್ರಿದಿ ಹೊಗಳಿದ್ದಾರೆ.
ಅವರ ಈ ಹೇಳಿಕೆ ಟ್ರೋಲ್ ಗೊಳಗಾಗಿದೆ. ಬಹುಶಃ ಅಫ್ರಿದಿ ತಾಲಿಬಾನ್ ಪ್ರೀಮಿಯರ್ ಲೀಗ್ ಹುಟ್ಟುಹಾಕುವ ಉದ್ದೇಶ ಹೊಂದಿರಬೇಕು. ಅದಕ್ಕೇ ಉಗ್ರರನ್ನು ಬೆಂಬಲಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.