Publish Date: Mon, 09 Dec 2019 (09:26 IST)
Updated Date: Mon, 09 Dec 2019 (09:28 IST)
ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ತವರಿನ ಹೀರೋ ಸಂಜು ಸ್ಯಾಮ್ಸನ್ ಗೆ ಅವಕಾಶ ಕೊಡಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು.
ಆದರೆ ಅಭಿಮಾನಿಗಳ ಒತ್ತಾಸೆಗೆ ಕಿವಿಗೊಡದ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮತ್ತೆ ರಿಷಬ್ ಪಂತ್ ಗೇ ಮಣೆ ಹಾಕಿತು.
ಕೇರಳದವರೇ ಆದ ಸಂಜು ವಿಮಾನ ನಿಲ್ದಾಣಕ್ಕೆ ಬಂದಿಳಿಯುವಾಗ ಮತ್ತು ಮೈದಾನದಲ್ಲಿ ಅಭ್ಯಾಸ ನಡೆಸುವಾಗಲೂ ಭಾರೀ ಹರ್ಷೋದ್ಘಾರ ಮಾಡಿದ್ದ ಅಭಿಮಾನಿಗಳು ಅವರನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದ್ದರು. ಆದರೆ ಸ್ಯಾಮ್ಸನ್ ಗೆ ತವರಿನಲ್ಲಿ ಅವಕಾಶ ಕೊಡಲೇ ಇಲ್ಲ. ಇದು ಅಭಿಮಾನಿಗಳಿಗೂ ಬೇಸರ ತರಿಸಿತು.