Publish Date: Sun, 08 Dec 2019 (09:17 IST)
Updated Date: Sun, 08 Dec 2019 (09:19 IST)
ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಕೇರಳದ ತಿರುವನಂತಪುರಂನ ಮೈದಾನ ಇದಕ್ಕಾಗಿ ಸಜ್ಜಾಗಿದೆ.
ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಟೀಂ ಇಂಡಿಯಾಗೆ ಇಂದಿನ ಪಂದ್ಯ ಗೆದ್ದರೆ ಸರಣಿ ಕೈವಶವಾಗುತ್ತದೆ. ಅತ್ತ ವಿಂಡೀಸ್ ಗೆ ಪ್ರತಿಷ್ಠೆ ಉಳಿಸಿಕೊಳ್ಳಲು ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ.
ಇತಿಹಾಸ ಗಮನಿಸಿದರೆ ಈ ಮೈದಾನದಲ್ಲಿ ದೊಡ್ಡ ಮೊತ್ತವೇನೂ ದಾಖಲಾಗಿಲ್ಲ. ಇದುವರೆಗಿನ ಗರಿಷ್ಠ ಮೊತ್ತವೆಂದರೆ 67 ರನ್. ಹೀಗಾಗಿ ಇಲ್ಲಿ ಬೌಲರ್ ಗಳು ನಿರ್ಣಾಯಕವಾಗಬಹುದು. ಭಾರತ ತಂಡದಲ್ಲಿ ಬದಲಾವಣೆಯ ಸಾಧ‍್ಯತೆಯಿಲ್ಲ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.