Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾದ ಆರಂಭದ ಅಬ್ಬರ ಕೊನೆಯವರೆಗೂ ಉಳಿಯಲಿಲ್ಲವೇಕೆ?

ಟೀಂ ಇಂಡಿಯಾದ ಆರಂಭದ ಅಬ್ಬರ ಕೊನೆಯವರೆಗೂ ಉಳಿಯಲಿಲ್ಲವೇಕೆ?
ಕೇಪ್ ಟೌನ್ , ಶುಕ್ರವಾರ, 5 ಜನವರಿ 2018 (20:37 IST)
ಕೇಪ್ ಟೌನ್: ಹೇಳಿ ಕೇಳಿ ಇದು ವೇಗಿಗಳ ಸ್ವರ್ಗವೆನಿಸುವ ಪಿಚ್. ಇಲ್ಲಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ವಿಚಲಿತರಾಗದೇ ಸಣ್ಣ ಸಣ್ಣ ಜತೆಯಾಟವಾಡಿ ಸ್ಪರ್ಧಾತ್ಮಕ ಮೊತ್ತ ದಾಖಲಿಸುವುದು ಹೇಗೆಂದು ದ.ಆಫ್ರಿಕಾಗೆ ಚೆನ್ನಾಗಿ ಗೊತ್ತು.
 

ಹಾಗಾಗಿ ಟೀಂ ಇಂಡಿಯಾ ಆರಂಭದಲ್ಲಿ ಮೆರೆದರೂ ಆಫ್ರಿಕನ್ನರ ಮಧ್ಯಮ ಕ್ರಮಾಂಕವನ್ನು ಅಲುಗಾಡಿಸಲಾಗದೇ, ಕೊನೆಯಲ್ಲಿ ಸಿಕ್ಕ ಸಣ್ಣ ಸಣ್ಣ ಜತೆಯಾಟಗಳನ್ನು ಬಿಡಿಸಲಾಗದೇ ಎದುರಾಳಿಗೆ ಪೈಪೋಟಿ ನೀಡುವಂತಹ ಮೊತ್ತ ದಾಖಲಿಸಲು ಅನುವು ಮಾಡಿಕೊಟ್ಟಿತು.

ಮೊದಲ ದಿನವೇ ದ. ಆಫ್ರಿಕಾ 286 ಕ್ಕೆ ಆಲೌಟ್ ಆಗಿದೆ. ಭಾರತದ ಪರ ಆರಂಭದಲ್ಲೇ ಪಿಚ್ ನ ಲಾಭ ಪಡೆಯಲು ಸಾಧ್ಯವಾಗಿದ್ದು ಭುವನೇಶ್ವರ್ ಕುಮಾರ್ ಗೆ. ಸಾಥಿ ಮೊಹಮ್ಮದ್ ಶಮಿಯಿಂದ ಅಷ್ಟೊಂದು ಸಾಥ್ ಸಿಗದ ಕಾರಣ ಇನ್ನಷ್ಟು ಮರ್ಮಾಘಾತ ನೀಡುವ ಕನಸು ನನಸಾಗಲಿಲ್ಲ. ಭುವನೇಶ್ವರ್ ಕುಮಾರ್ ಆರಂಭದಲ್ಲಿಯೇ ಸತತ ನಾಲ್ಕು ವಿಕೆಟ್ ಕಿತ್ತು ನಾಯಕ ಕೊಹ್ಲಿಯ ಮುಖದಲ್ಲಿ ಎಂದಿನ ನಗೆ ತರುವಲ್ಲಿ ಯಶಸ್ವಿಯಾದರು. ಅವರ ಕೆಲವು ಸ್ವಿಂಗ್ ಬಾಲ್ ಗಳು ಇಂಗ್ಲೆಂಡ್ ನ ವೇಗಿ ಆಂಡರ್ಸನ್ ನೆನಪಿಸುವಂತಿತ್ತು.

ಇದರ ನಡುವೆ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಒಂದೊಂದು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು. ಪದಾರ್ಪಣೆ ಮಾಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಅಪಾಯಕಾರಿಯಾಗಿದ್ದ ಎಬಿಡಿ ವಿಲಿಯರ್ಸ್ ವಿಕೆಟ್ ಕಿತ್ತರು. ಅಶ್ವಿನ್ ಗೆ ಪಿಚ್ ನಿಂದ ಹೆಚ್ಚಿನ ಲಾಭ ಸಿಗಲಿಲ್ಲ. ಹಾಗಿದ್ದರೂ ಒಂದು ಅದ್ಭುತ ರನೌಟ್ ಮತ್ತೆರಡು ವಿಕೆಟ್ ಕೀಳುವ ಮೂಲಕ ತಂಡಕ್ಕೆ ನೆರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಟೆಸ್ಟ್ ನಲ್ಲೇ ಟಾಸ್ ಸೋತ ಟೀಂ ಇಂಡಿಯಾ! ಕೆಎಲ್ ರಾಹುಲ್ ಗೆ ನಿರಾಸೆ!