ಮುಂಬೈ: ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿ ಸದ್ಯಕ್ಕೆ ಏಕದಿನ ಮತ್ತು ಟಿ20 ಕ್ರಿಕೆಟ್ ಮಾತ್ರ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿಯ ಭಾರೀ ಸಂಭಾವನೆಗೆ ಬಿಸಿಸಿಐ ಕತ್ತರಿ ಹಾಕುತ್ತಾ?!
ಮೂಲಗಳ ಪ್ರಕಾರ ಹೌದು. ಸದ್ಯಕ್ಕೆ ಸೀಮಿತ ಓವರ್ ಗಳಿಗೆ ಮಾತ್ರ ಮೀಸಲಾಗಿರುವ ಧೋನಿ ಬಿಸಿಸಿಐನ ಎ ಗ್ರೇಡ್ ಗುತ್ತಿಗೆಯನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಕ್ರಿಕೆಟ್ ಆಡಳಿತ ಮಂಡಳಿ ಇದೀಗ ಕ್ರಿಕೆಟಿಗರ ವೇತನ ಹೆಚ್ಚಿಸಲು ಮುಂದಾಗಿದ್ದು ಅದಕ್ಕಾಗಿ ಎ ಪ್ಲಸ್, ಎ, ಬಿ ಮತ್ತು ಸಿ ಎಂದು ನಾಲ್ಕು ವಿಭಾಗಗಳಾಗಿ ಆಟಗಾರರ ಗ್ರೇಡ್ ವಿಭಜಿಸಿದೆ.
ಇವರ ಪೈಕಿ ಎ ಪ್ಲಸ್ ಗ್ರೇಡ್ ನಲ್ಲಿ ಮೂರೂ ಮಾದರಿಯ ಕ್ರಿಕೆಟ್ ಆಡುವ ಆಟಗಾರರಿರುತ್ತಾರೆ. ಇದರಿಂದ ಸಹಜವಾಗಿಯೇ ಧೋನಿ ಅಗ್ರ ಶ್ರೇಣಿಯ ಗುತ್ತಿಗೆ ಕಳೆದುಕೊಳ್ಳಲಿದ್ದಾರೆ. ಎ ಶ್ರೇಣಿಯ ಆಟಗಾರರ ಸಂಭಾವನೆಯನ್ನು 1 ಕೋಟಿಯಿಂದ 2 ಕೋಟಿಗೆ ಹೆಚ್ಚಿಸಲು ಕ್ರಿಕೆಟ್ ಸಮಿತಿ ಬಿಸಿಸಿಐಗೆ ಸಲಹೆ ನೀಡಿತ್ತು. ಅದರಂತೆ ನಡೆದರೆ ಧೋನಿ ಭಾರೀ ಸಂಭಾವನೆಯಿಂದ ವಂಚಿತರಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ