Publish Date: Fri, 01 Jan 2021 (09:52 IST)
Updated Date: Fri, 01 Jan 2021 (09:53 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಡುತ್ತಾರೋ ಇಲ್ಲವೋ ಎಂಬ ಅನುಮಾನಗಳಿಗೆ ಉತ್ತರವೆಂಬಂತೆ ಅವರು ನೆಟ್ ಪ್ರಾಕ್ಟೀಸ್ ನಲ್ಲಿ ಪಾಲ್ಗೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ರೋಹಿತ್ ಭಾರತದ ಇತರ ಕ್ರಿಕೆಟಿಗರೊಂದಿಗೆ ಫೀಲ್ಡಿಂಗ್ ಪ್ರಾಕ್ಟೀಸ್ ನಡೆಸಿದ್ದಾರೆ. ಹೀಗಾಗಿ ಅವರು ಮೂರನೇ ಟೆಸ್ಟ್ ನಲ್ಲಿ ಆಡಬಹುದು ಎಂದು ಅಭಿಮಾನಿಗಳಿಗೆ ಖಚಿತವಾಗಿದೆ. ದ್ವಿತೀಯ ಟೆಸ್ಟ್ ಬಳಿಕ ರೋಹಿತ್ ದೈಹಿಕ ಕ್ಷಮತೆ ನೋಡಿಕೊಂಡು ಮೂರನೇ ಟೆಸ್ಟ್ ನಲ್ಲಿ ಆಡಬೇಕೋ, ಬೇಡವೋ ಎಂಬ ಬಗ್ಗೆ ತೀರ್ಮಾನವಾಗಲಿದೆ ಎಂದಿದ್ದರು.