Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನ್ಯಾಟಿಂಗ್ ಹ್ಯಾಮ್: ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಪರವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ನಾಯಕ ಕಪಿಲ್ ದೇವ್ ಸಹಿತ ಅನೇಕ ಮಾಜಿ ಕ್ರಿಕೆಟಿಗರು ಕೊಹ್ಲಿಯನ್ನು ತಂಡದಿಂದ ಹೊರಗಿಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ರೋಹಿತ್ ನಿನ್ನೆಯ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಕಪಿಲ್ ಹೊರಗಿನಿಂದಷ್ಟೇ ನಮ್ಮನ್ನು ನೋಡುತ್ತಿದ್ದಾರೆ. ಒಳಗೆ ಏನಾಗುತ್ತಿದೆ ಎಂದು ಅವರಿಗೆ ಅರಿವಿಲ್ಲ. ನಮಗೆ ನಮ್ಮದೇ ಆದ ಯೋಜನೆಗಳಿವೆ. ನಾವು ತಂಡ ಕಟ್ಟುವುದರ ಹಿಂದೆ ಸಾಕಷ್ಟು ಯೋಚನೆ ಮಾಡಿರುತ್ತೇವೆ. ನಾವು ಎಲ್ಲರನ್ನೂ ಬೆಂಬಲಿಸಿ ಅವಕಾಶ ಕೊಡುತ್ತೇವೆ. ಹೊರಗೆ ಏನೇ ಆಗುತ್ತಿದ್ದರೂ ಅದು ನಮಗೆ ಮುಖ್ಯವಲ್ಲ ಎಂದು ರೋಹಿತ್ ವಿರಾಟ್ ಪರವಾಗಿ ತಿರುಗೇಟು ನೀಡಿದ್ದಾರೆ.