ಮುಂಬೈ: ಐಪಿಎಲ್ ನಲ್ಲಿ ಇದೀಗ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯರನ್ನು ನಾಯಕರಾಗಿ ನೇಮಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾಕಿದ್ದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಮುಂಬೈ ಏಕಾಏಕಿ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ ಗಳನ್ನು ಕಳೆದುಕೊಂಡಿದೆ. ಹಲವರು ಮುಂಭೈ ಇಂಡಿಯನ್ಸ್ ಜೆರ್ಸಿ, ಬಾವುಟ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಈ ನಡುವೆ ಟ್ರೇಡಿಂಗ್ ವಿಂಡೋ ಸಮಯದಲ್ಲಿ ರೋಹಿತ್ ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಬೇಡಿಕೆಯಿಟ್ಟಿದ್ದ ಸಂಗತಿ ಹೊರಬರುತ್ತಿದೆ. ರೋಹಿತ್ ರನ್ನು ನಮಗೆ ಕೊಡಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ಕೇಳಿಕೊಂಡಿತ್ತಂತೆ. ಆದರೆ ಮುಂಬೈ ಈ ಡೀಲ್ ಗೆ ಒಪ್ಪಲಿಲ್ಲ ಮಾಹಿತಿ ಬರುತ್ತಿದೆ.
ರಿಷಬ್ ಪಂತ್ ಆಡುವುದು ಅನಿಶ್ಚಿತತೆಯಲ್ಲಿರುವಾಗ ಡೆಲ್ಲಿಗೆ ಒಬ್ಬ ಸಶಕ್ತ ನಾಯಕನ ಅಗತ್ಯವಿತ್ತು. ಹೀಗಾಗಿ ರೋಹಿತ್ ರನ್ನು ಸೆಳೆಯಲು ಪ್ರಯತ್ನ ನಡೆಸಿತ್ತು. ಆದರೆ ಮುಂಬೈ ಅದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ.