ಮುಂಬೈ: ಐಪಿಎಲ್ ನಲ್ಲಿ ಗರಿಷ್ಠ ಟ್ರೋಫಿ ಗೆದ್ದ ಖ್ಯಾತಿಯ ರೋಹಿತ್ ಶರ್ಮಾರನ್ನು ಮುಂಬೈ ನಾಯಕತ್ವದಿಂದ ಕೊಕ್ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯರನ್ನು ನೂತನ ನಾಯಕನಾಗಿ ಆಯ್ಕೆ ಮಾಡಿದೆ.
ಗುಜರಾತ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಮರಳಿ ಟ್ರೇಡಿಂಗ್ ವಿಂಡೋ ಮೂಲಕ ಖರೀದಿ ಮಾಡಿತ್ತು. ಆಗಲೇ ಹಾರ್ದಿಕ್ ರನ್ನು ನಾಯಕರಾಗಿ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ ಎಂದು ಅಭಿಮಾನಿಗಳು ಅಂದಾಜಿಸಿದ್ದರು. ಮುಂಬೈ ನೂತನ ನಾಯಕ ಹಾರ್ದಿಕ್ 15 ಕೋಟಿ ರೂ. ವೇತನ ಪಡೆಯಲಿದ್ದಾರೆ.
ಅದೀಗ ನಿಜವಾಗಿದೆ. ಯಶಸ್ವೀ ನಾಯಕನಿಗೆ ಕೊಕ್ ನೀಡಿ ನೂತನ ನಾಯಕನಿಗೆ ಪಟ್ಟ ಕಟ್ಟಲಾಗಿದೆ. ರೋಹಿತ್ ಶರ್ಮಾಗೆ ಈಗ 36 ವರ್ಷ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನಾಯಕನಿಗೆ ಅವಕಾಶ ನೀಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ರೋಹಿತ್ ಶರ್ಮಾ 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಇದುವರೆಗೆ ಐಪಿಎಲ್ ನಲ್ಲಿ 5 ಬಾರಿ ಚಾಂಪಿಯನ್ ಆದ ಗರಿಮೆ ರೋಹಿತ್ ರದ್ದು. ಇದೀಗ ಅವರ ನಾಯಕತ್ವ ಕೊನೆಗೊಂಡಿದೆ.