ಮುಂಬೈ: ಟೀಂ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿಶ್ವಕಪ್ ಬಳಿಕ ಗುಡ್ ಬೈ ಹೇಳಲಿದ್ದಾರೆ. ಅವರ ಸ್ಥಾನಕ್ಕೆ ನಾಯಕರಾಗುವವರು ಯಾರು ಎಂಬ ಬಗ್ಗೆ ಈಗ ಶುರುವಾಗಿದೆ.
ಟೀಂ ಇಂಡಿಯಾ ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗುವುದು ಬಹುತೇಕ ಪಕ್ಕಾ ಆಗಿದೆ. ಸ್ವತಃ ಕೊಹ್ಲಿ ಕೂಡಾ ರೋಹಿತ್ ಹೆಸರನ್ನೇ ಅನುಮೋದಿಸಿದ್ದಾರೆ.
ಆದರೆ ರೋಹಿತ್ ಗೆ ಉಪನಾಯಕರಾಗಿ ಕೆಎಲ್ ರಾಹುಲ್ ಆಯ್ಕೆಯಾಗುವ ಸಾಧ‍್ಯತೆಯಿದೆ. ರೋಹಿತ್ ಶರ್ಮಾಗೆ ಈಗಾಗಲೇ 34 ವರ್ಷ ವಯಸ್ಸಾಗಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಮತ್ತೊಬ್ಬ ನಾಯಕನನ್ನು ತಯಾರು ಮಾಡಲು ಬಿಸಿಸಿಐ ಮೂರೂ ಫಾರ್ಮ್ಯಾಟ್ ಗಳಲ್ಲಿ ಮಿಂಚುತ್ತಿರುವ ಕೆಎಲ್ ರಾಹುಲ್ ಗೆ ಉಪನಾಯಕನ ಪಟ್ಟ ನೀಡುವ ಸಾಧ್ಯತೆಯಿದೆ.