Publish Date: Fri, 07 Oct 2022 (18:57 IST)
Updated Date: Fri, 07 Oct 2022 (18:59 IST)
ಪರ್ತ್: ಟಿ20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ಬಂದಿಳಿದಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕ್ರಿಕೆಟಿಗರು ನಿನ್ನೆಯಷ್ಟೇ ಆಸ್ಟ್ರೇಲಿಯಾಗೆ ತೆರಳಿದ್ದರು. ಇದೀಗ ಪರ್ತ್ ತಲುಪಿರುವುದಾಗಿ ರೋಹಿತ್ ಅಪ್ ಡೇಟ್ ನೀಡಿದ್ದಾರೆ.
ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಗೆ ಚಾಲನೆ ಸಿಗಲಿದ್ದು, ಭಾರತ ತಂಡ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಅಕ್ಟೋಬರ್ 23 ಕ್ಕೆ ಆಡಲಿದೆ.
-Edited by Rajesh Patil