Publish Date: Fri, 07 Oct 2022 (09:40 IST)
Updated Date: Fri, 07 Oct 2022 (09:51 IST)
ಮುಂಬೈ: ದ.ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸಿ ಅಜೇಯರಾಗುಳಿದ ಸಂಜು ಸ್ಯಾಮ್ಸನ್ ಪರವಾಗಿ ನೆಟ್ಟಿಗರು ಬ್ಯಾಟ್ ಬೀಸಿದ್ದಾರೆ.
ಸಂಜು ಸ್ಯಾಮ್ಸನ್ ರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡದೇ ಇರುವ ಬಗ್ಗೆ ನೆಟ್ಟಿಗರು ಈ ಮೊದಲೇ ಆಕ್ರೋಶ ವ್ಯಕ್ತಪಡಿಸಿದ್ದರು. ರಿಷಬ್ ಪಂತ್ ಫಾರ್ಮ್ ನಲ್ಲಿಲ್ಲದೇ ಹೋದರೂ ತಂಡ ಸಂಜುರನ್ನು ಕಡೆಗಣಿಸುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ದ.ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲೂ ಕೀಪಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಜವಾಬ್ಧಾರಿಯುತ ಆಟವಾಡಿರುವ ಸಂಜು ಪರವಾಗಿ ನೆಟ್ಟಿಗರು ಮಾತನಾಡಿದ್ದು, ರಿಷಬ್ ಗಿಂತ ಸಂಜುವೇ ಬೆಸ್ಟ್ ಎಂದಿದ್ದಾರೆ.
-Edited by Rajseh Patil