Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನ ಚಹಾ ವಿರಾಮದ ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ.
ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರವೀಂದ್ರ ಜಡೇಜಾ-ರಿಷಬ್ ಪಂತ್ ಜೋಡಿ ಚೇತರಿಕೆ ನೀಡಿದೆ. ಆರನೇ ವಿಕೆಟ್ ಗೆ ಜೊತೆಯಾಗಿರುವ ಈ ಜೋಡಿ76 ರನ್ ಗಳ ಜೊತೆಯಾಟವಾಡಿದೆ. ರಿಷಬ್ ಪಂತ್ 53 ರನ್ ಗಳಿಸಿ ಕ್ರೀಸ್ ನಲ್ಲಿದ್ದರೆ ಜಡೇಜಾ 32 ರನ್ ಗಳಿಸಿ ಆಡುತ್ತಿದ್ದಾರೆ.
ಇದಕ್ಕೂ ಮೊದಲು ಆರಂಭಿಕರಾದ ಶುಬ್ನಂ ಗಿಲ್ 17, ಚೇತೇಶ್ವರ ಪೂಜಾರ 13, ಹನುಮ ವಿಹಾರಿ 20, ವಿರಾಟ್ ಕೊಹ್ಲಿ 11 ಮತ್ತು ಶ್ರೇಯಸ್ ಅಯ್ಯರ್ ಕೇವಲ 15 ರನ್ ಗಳಿಸಿ ಪೆವಿಲಿಯನ್ ಗೆ ತೆರಳಿದರು. ಇಂಗ್ಲೆಂಡ್ ಪರ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ 3, ಮ್ಯಾಟೀ ಪಾಟ್ಸ್ 2 ವಿಕೆಟ್ ಕಬಳಿಸಿದರು.