ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ಟಾಸ್ ವೇಳೆ ಕಮೆಂಟೇಟರ್ ಮಾರ್ಕ್ ಬುಚರ್ ಗೆ ತಿಳಿಸಿ ಹೇಳಿದ ಘಟನೆ ನಡೆದಿದೆ.
ಈ ಪಂದ್ಯದ ಮೂಲಕ ಬುಮ್ರಾ 35 ವರ್ಷಗಳ ಬಳಿಕ ವೇಗಿಯೊಬ್ಬರು ಭಾರತ ತಂಡದ ನಾಯಕತ್ವ ವಹಿಸಿದ ದಾಖಲೆ ಮಾಡಿದರು. ಇದಕ್ಕೆ ಮೊದಲು ಕಪಿಲ್ ದೇವ್ ಈ ಸಾಧನೆ ಮಾಡಿದ್ದರು.
ಆದರೆ ಟಿವಿ ಸಂದರ್ಶಕರಾಗಿರುವ ಮಾರ್ಕ್ ಬುಚರ್ ನೀವು ಮೊದಲ ವೇಗಿ ಎಂದು ಪ್ರಶಂಸಿಸಿದರು. ಈ ವೇಳೆ ಬುಚರ್ ತಪ್ಪು ತಿದ್ದಿ ಬುಮ್ರಾ ನನಗಿಂತ ಮೊದಲು ಕಪಿಲ್ ಭಾಯಿ ಈ ಸಾಧನೆ ಮಾಡಿದ್ದಾರೆ ಎಂದರು. ಇದಕ್ಕೆ ಬುಚರ್ ಅವರು ಆಲ್ ರೌಂಡರ್ ಆಗಿದ್ದರು ಎಂದರು. ಅದಕ್ಕೆ ಬುಮ್ರಾ ತಕ್ಕ ತಿರುಗೇಟು ನೀಡಿದ್ದು, ಅದು ನೀವು ಹೇಗೆ ಅಂದುಕೊಳ್ಳುತ್ತೀರೋ ಹಾಗೆ ಎಂದರು.