Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಏಕದಿನ ನಾಯಕತ್ವದಿಂದ ಬಿಸಿಸಿಐ ವಿರಾಟ್ ಕೊಹ್ಲಿಗೆ ಕೊಕ್ ನೀಡಲು ಕಾರಣವೇನು ಎಂಬ ಚರ್ಚೆ ಶುರುವಾಗಿದೆ. ಅದರಲ್ಲೂ ಕೆಲವರು ಇದಕ್ಕೆ ಪ್ರಮುಖ ಕಾರಣ ಮುಂಬರುವ ಏಕದಿನ ವಿಶ್ವಕಪ್ ಎನ್ನುತ್ತಿದ್ದಾರೆ.
ಮುಂಬರುವ ಏಕದಿನ ವಿಶ್ವಕಪ್ ಗೆ ಇನ್ನು ಒಂದೇ ವರ್ಷ ಬಾಕಿಯಿದೆ. 2023 ರಲ್ಲಿ ನಡೆಯಲಿರುವ ವಿಶ್ವಕಪ್ ಗೆ ರೋಹಿತ್ ಶರ್ಮಾರನ್ನೇ ತಂಡದ ನಾಯಕರಾಗಿ ಮಾಡಬೇಕು ಎಂಬುದು ಬಿಸಿಸಿಐ ಲೆಕ್ಕಾಚಾರವಾಗಿತ್ತು. ಇದೇ ಕಾರಣಕ್ಕೆ ಕೊಹ್ಲಿಯನ್ನು ತಾವಾಗಿಯೇ ನಾಯಕತ್ವದಿಂದ ಕೆಳಗಿಳಿಯಲು ಸೂಚಿಸಿತ್ತು ಎನ್ನಲಾಗಿದೆ.
ಆದರೆ ವಿರಾಟ್ ನಾಯಕತ್ವ ತ್ಯಜಿಸಲು ಮೀನ ಮೇಷ ಎಣಿಸುತ್ತಿದ್ದರು. ಐಸಿಸಿ ಈವೆಂಟ್ ಗಳಲ್ಲಿ ಕೊಹ್ಲಿ ದಾಖಲೆ ಚೆನ್ನಾಗಿಲ್ಲ. ಹೀಗಾಗಿ ತಂಡದ ಹಿತದೃಷ್ಟಿಯಿಂದ ಆಯ್ಕೆ ಸಮಿತಿಯೇ ಅವರನ್ನು ಪದಚ್ಯುತಗೊಳಿಸಿತು ಎನ್ನಲಾಗುತ್ತಿದೆ.