Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ವಿರಾಟ್ ಕೊಹ್ಲಿಯಿಂದ ಸೀಮಿತ ಓವರ್ ಗಳ ನಾಯಕತ್ವ ಪಡೆದುಕೊಂಡಿರುವ ರೋಹಿತ್ ಶರ್ಮಾ ಕೊಹ್ಲಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೊಹ್ಲಿ ಈಗಲೂ ನಮ್ಮ ನಾಯಕ. ಅವರ ಅನುಭವ, ಬ್ಯಾಟಿಂಗ್ ನಮಗೆ ಅತೀ ಅಗತ್ಯ. ಅದು ಯಾವುದನ್ನೂ ಕಳೆದುಕೊಳ್ಳಲಾರೆವು ಎಂದಿದ್ದಾರೆ.
ಕೊಹ್ಲಿ ಈಗಲೂ ನಮ್ಮ ನಾಯಕ. ಎಷ್ಟೋ ಸಂದರ್ಭಗಳಲ್ಲಿ ಅವರು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ತಂಡದಲ್ಲಿ ಅವರ ಉಪಸ್ಥಿತಿ ತುಂಬಾ ಮುಖ್ಯ. ಕೊಹ್ಲಿಯಂತಹ ಆಟಗಾರ ತಂಡಕ್ಕೆ ಯಾವತ್ತೂ ಮುಖ್ಯ ಎಂದು ನೂತನ ನಾಯಕ ರೋಹಿತ್ ಹಾಡಿ ಹೊಗಳಿದ್ದಾರೆ.